ಇಡೀ ರಾಜದಾದ್ಯಂತ ದರ್ಶನ್ ಫ್ಯಾನ್ಸ್ ನಿದ್ದೆ ಮಾಡಿಲ್ಲ.
ಇಂದು ಬೆಳ್ಳಗೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ.ಥಿಯೇಟರ್ ನಲ್ಲಿ ಮೊದಲ ಪ್ರದರ್ಶನ ಶುರುವಾಗುವ ಮುನ್ನವೇ ಅಭಿಮಾನಿಗಳು ಬಾಸ್ ಸಿನಿಮಾ ಬಿಡುಗಡೆ ಎಂದು ಸಂಭ್ರಮಿಸಿದರು.
ರಾತ್ರಿ ನಿದ್ದೆ ಇಲ್ಲ, ಡಿಬಾಸ್ ಮೂವಿಗೋಸ್ಕರನೇ ಎಲ್ಲಾ
ಇಂದು ಸಿನಿಮಾ ರಿಲೀಸ್ ಆದರೆ ದರ್ಶನ್ ಅಭಿಮಾನಿಗಳು ನಿದ್ದೆ ಗೆ ಬೈ ಹೇಳಿ ರಾತ್ರಿ ಇಡೀ ಖುಷಿಯಿಂದ ಸಂಭ್ರಮಿಸಿದ್ದಾರೆ.ರಾತ್ರಿ 12 ಗಂಟೆಯದರೂ ಸಂಭ್ರಮಕ್ಕೆ ಬ್ರೇಕ್ ಹಾಕಿಲ್ಲ.ನೂರಾರು ಪಟಾಕಿ ಸಿಡಿಸಿ, ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ ಡೆವಿಲ್ ಬರ ಮಾಡಿಕೊಂಡರು.
ಹಲವಾರು ಕಡೆ ದರ್ಶನ್ ಚಿತ್ರದ ಹಾಡಿಗೆ ಅಭಿಮಾನಿಗಳು ಹೆಜ್ಜೆ ಹಾಕಿ ದಿಲ್ ಖುಷ್ ಆದರು.
ಅಭಿಮಾನಿಗಳು ಡೆವಿಲ್ ಫಿಲಂ ಅನೌನ್ಸ್ ಆದ ದಿನದಿಂದ ಇಲ್ಲಿಯವರೆಗೆ ನಿರಂತರವಾಗಿ ತಮ್ಮ ಬೆಂಬಲವನ್ನು ದರ್ಶನ್ ಅವರಿಗೆ ನೀಡುತ್ತಾ ಬಂದಿದ್ದಾರೆ.ಬಹುಷಃ ಹೀಗಾಗಿ ದರ್ಶನ್ ಅವರು ತಮ್ಮ ಫ್ಯಾನ್ಸ್ ಇದ್ರೆ ಸಾಕು ನನಗೆ ಅನ್ನೋದು.