68ನೇ ವಸಂತಕ್ಕೆ ಕಾಲಿಟ್ಟ ಡೈನಾಮಿಕ್ ಸ್ಟಾರ್..!

ಸ್ಯಾಂಡಲ್ವುಡ್ನ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 68ನೇ ವಸಂತಕ್ಕೆ ಕಾಲಿಟ್ಟ ನಟ ದೇವರಾಜ್ ಅವರು ಕುಟುಂಬದೊಂದಿಗೆ ತಮ್ಮ ಬರ್ತ್ ಡೇ ಸೆಲಬ್ರೇಟ್ ಮಾಡಿದ್ದಾರೆ. ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ಸ್ನೇಹಿತರು ಅವರಿಗೆ ಹುಟ್ಟುಹಬ್ಬದ ಶುಭಕೋರುತ್ತಿದ್ದಾರೆ. ಈ ಖುಷಿಯನ್ನು ಹೆಚ್ಚಿಸಲು ದೇವರಾಜ್ಗೆ ಈ ಬಾರಿ ಸೈಮಾ ಅವಾರ್ಡ್ ಕೂಡ ಸಿಕ್ಕಿದೆ. ಹುಟ್ಟುಹಬ್ಬದ ಹೊಸ್ತಿಲಲ್ಲೇ ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ವಿಶೇಷ. ‘ಯಜಮಾನ’ ಸಿನಿಮಾದಲ್ಲಿನ ನಟನೆಗೆ ಅವರು ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಸಂಭ್ರಮಕ್ಕಾಗಿ ಎಲ್ಲರಿಂದಲೂ ಅಭಿನಂದನೆ ಸಲ್ಲಿಕೆ ಆಗುತ್ತಿದೆ.
ನೂರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು ದೇವರಾಜ್. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳಿನ ಅನೇಕ ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. 1991ರಲ್ಲಿ ‘ವೀರಪ್ಪನ್’ ಚಿತ್ರದ ನಟನೆಗಾಗಿ ಅವರಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. 1987ರಲ್ಲಿ ‘ಆಗಂತುಕ’ ಚಿತ್ರದಲ್ಲಿನ ನಟನೆಗೆ ‘ಅತ್ಯುತ್ತಮ ಪೋಷಕ ನಟ’ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದರು. ಈಗ ಅವರ ಮುಡಿಗೆ ಸೈಮಾ ಗರಿ ಸೇರ್ಪಡೆ ಆಗಿದೆ. ಅವರು ನಿಭಾಯಿಸಿದ ಪೊಲೀಸ್ ಆಫೀಸರ್ ಪಾತ್ರಗಳನ್ನು ಅಭಿಮಾನಿಗಳು ಎಂದಿಗೂ ಮರೆಯುವಂತಿಲ್ಲ.

****