ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ಸಂಭಾಷಣೆಕಾರ ಗುರುಕಶ್ಯಪ್ ಸೋಮವಾರ (ಸೆ.13) ರಾತ್ರಿ ಹೃದಯಾಘಾತದಿಂದ ಮೃತ್ತಪಟ್ಟಿದ್ದಾರೆ. ಗುರುಕಶ್ಯಪ್ಅವರು ಗಣೇಶ್ ಅಭಿನಯದ ‘ಸುಂದರಾಂಗ ಜಾಣ’, ರಮೇಶ್ ಅರವಿಂದ್ ನಟನೆಯ ‘ಪುಷ್ಪಕ ವಿಮಾನ’, ಪ್ರಿಯಾಂಕಾ ಉಪೇಂದ್ರ ಅಭಿನಯದ ‘ದೇವಕಿ’ ಇನ್ಸ್‌ಪೆಕ್ಟರ್ ವಿಕ್ರಂ, ಶುಗರ್ ಲೆಸ್ ಮುಂತಾದ ಸಿನಿಮಾಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದರು. 15ಕ್ಕೂ ಹೆಚ್ಚು ಸಿನಿಮಾಗಳಿಗೆ ಗುರು ಕಶ್ಯಪ್ ಕೆಲಸ ಮಾಡಿದ್ದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ನಿಧನಕ್ಕೂ ಮುನ್ನ ಅನೇಕ ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಂಡಿದ್ದರು.
ಡಾಲಿ ಧನಂಜಯ ನಟನೆಯ ‘ಮಾನ್ಸೂನ್ ರಾಗ’, ಶಿವರಾಜ್ಕುಮಾರ್ ಅಭಿನಯದ ‘ಬೈರಾಗಿ’, ‘ವ್ಹೀಲ್ ಚೇರ್ ರೋಮಿಯೋ’ ಮುಂತಾದ ಸಿನಿಮಾಗಳಿಗೆ ಅವರು ಡೈಲಾಗ್ ಬರೆಯುತ್ತಿದ್ದರು. ಆ ಸಿನಿಮಾಗಳು ತೆರೆಕಾಣುವುದಕ್ಕೂ ಮುನ್ನವೇ ಅವರು ನಿಧನರಾಗಿದ್ದಾರೆ. ಪತ್ನಿ ಮತ್ತು ಮಗಳನ್ನು ಗುರು ಕಶ್ಯಪ್ ಅಗಲಿದ್ದಾರೆ.