ಸಂದೇಶ್ ನಾಗರಾಜ್ ಅವರಿಂದ ‘ಸಲಗ’ ಚಿತ್ರಕ್ಕೆ ಶುಭಹಾರೈಕೆ..!

ಚಿತ್ರಮಂದಿರಗಳ ಶೇ 100% ಭರ್ತಿ ಗೆ ಪರ್ಮಿಷನ್ ಸಿಕ್ಕ ಬೆನ್ನಲ್ಲೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಗದ್ದಲ ಜೋರಾಗಿದೆ. ಸಿನಿಮಾ ಕೆಲಸಗಳನ್ನು ಕಂಪ್ಲೀಟ್ ಮಾಡಿ ಚಿತ್ರಗಳನ್ನು ಬಿಡುಗಡೆ ಮಾಡಲು ಕಾದು ಕುಳಿತಿದ್ದ ನಿರ್ಮಾಪಕರು ಒಂದೇ ದಿನ ತಮ್ಮ ಚಿತ್ರಗಳನ್ನು ತೆರೆ ಮೇಲೆ ತರಲು ಪೈಪೋಟಿ ನಡೆಸಿದ್ದಾರೆ. ಸಲಗ ಮತ್ತು ಕೋಟಿಗೊಬ್ಬ 3 ಚಿತ್ರಗಳು ಅಕ್ಟೋಬರ್ 14 ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿವೆ. ಈಗ ಡಾರ್ಲಿಂಗ್ ಕೃಷ್ಣ ಅಭಿನಯದ ಕೃಷ್ಣ @gmail.com ಚಿತ್ರ ಅ 15ಕ್ಕೆ ಬಿಡುಗಡೆ ಆಗುತ್ತಿದೆ. ಚಿತ್ರ ಅಕ್ಟೋಬರ್ 15 ಕ್ಕೆ ಬಿಡುಗಡೆ ಮಾಡುತ್ತಿರುವ ಬಗ್ಗೆ ಚಿತ್ರದ ನಿರ್ಮಾಪಕರಾದ ಸಂದೇಶ್ ನಾಗರಾಜ್ ಮಾಹಿತಿ ನೀಡಿದ್ದಾರೆ. ಜೊತೆಗೆ ಎಲ್ಲ ಚಿತ್ರಗಳನ್ನು ಗೆಲ್ಲಿಸುವಂತೆ ಸಿನಿ ಪ್ರೇಮಿಗಳಲ್ಲಿ ವಿನಂತಿಸಿದ್ದಾರೆ.

ಶುಭ ಹಾರೈಸಿದ ಸಂದೇಶ ನಾಗರಾಜ್:

ರಾಷ್ಟ್ರ ಪ್ರಶಸ್ತಿ ವಿಜೇತ , ಮಾಜಿ ವಿಧಾನ ಪರಿಷತ್ ಸದಸ್ಯ, ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಂದ ಸಲಗ ಚಿತ್ರಕ್ಕೆ ಶುಭಹಾರೈಕೆ. ಅವರ ನಿರ್ಮಾಣದ ಕೃಷ್ಣ @gmail.com ಸಿನಿಮಾನೂ ಸಲಗದ ಜೊತೆಗೆ ಅಂದ್ರೆ ಅ.15ಕ್ಕೆ ತೆರೆಗೆ ಬರ್ತಿದೆ. ಈ ನಡುವೆ ಸಂದೇಶ್ ನಾಗರಾಜ್ ಅವ್ರು ತಮ್ಮ ಸಿನಿಮಾದ ಜತೆಗೆ ರಿಲೀಸ್ ಆಗ್ತಿರೋ ಮತ್ತೊಬ್ಬ ನಿರ್ಮಾಪಕ, ನಟ, ನಿರ್ದೇಶಕನಿಗೆ ಶುಭ ಕೋರುವ ಮೂಲಕ. ರಿಲೀಸ್ ಆಗ್ತಿರೋ‌ ಎಲ್ಲಾ ಸಿನಿಮಾಗಳನ್ನ ಎಲ್ಲಾರೂ ನೋಡಿ ಅಂತ ಪ್ರೇಕ್ಷಕರಿಗೆ ಆಹ್ವಾನದ ಸಂದೇಶ ನೀಡಿದ್ದಾರೆ.

****

Exit mobile version