ಶ್ರೀಮುರಳಿ ಮನೆಯಲ್ಲಿ ‘ಮದಗಜ 25’ ಸೆಲೆಬ್ರೇಷನ್

ಮದಗಜ 25 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಶ್ರೀಮುರಳಿ ಮನೆಯಲ್ಲಿ  25 ನೇ ದಿನದ ಸಂಭ್ರಮ ಕೂಟವನ್ನು ಏರ್ಪಡಿಸಲಾಗಿತ್ತು. ಚಿತ್ರದಲ್ಲಿ ಆಶಿಕಾ ರಂಗನಾಥ್, ತೆಲುಗು ಖ್ಯಾತ ನಟ ಜಗಪತಿ ಬಾಬು ವಿಲನ್ ಪಾತ್ರದಲ್ಲಿ ನಟಿಸಿದ್ರು.ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ರು.

YouTube player

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬ್ಲಾಕ್ ಬಸ್ಟರ್  ಸಿನಿಮಾ ‘ಮದಗಜ’ ಚಿತ್ರ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಡಿ.3ರಂದು ಬಿಡುಗಡೆಯಾದ ‘ಮದಗಜ’ ಚಿತ್ರಕ್ಕೆ ಭರ್ಜರಿ ಓಪನಿಂಗ್​ ಸಿಕ್ಕಿತ್ತು. 900ಕ್ಕೂ ಅಧಿಕ ಸ್ಕ್ರೀನ್​ಗಳಲ್ಲಿ ಪ್ರದರ್ಶನ ಕಂಡಿತ್ತು. ಆರಂಭದಲ್ಲಿ ಉತ್ತಮ ಕಲೆಕ್ಷನ್​ ಕೂಡ ಆಗಿತ್ತು ಎಂಬ ಬಗ್ಗೆ ಚಿತ್ರತಂಡ ಮಾಹಿತಿ ನೀಡಿತ್ತು. ಮೊದಲ ದಿನ 7.86 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂಬ ಬಗ್ಗೆ ಚಿತ್ರತಂಡವೇ ಮಾಹಿತಿ ಹಂಚಿಕೊಂಡಿತ್ತು. ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್​ ಗೌಡ ಬಂಡವಾಳ ಹೂಡಿದ್ದಾರೆ.​ ಬಿಡುಗಡೆಯಾಗಿ 25 ದಿನ ಕಳೆಯುವುದರೊಳಗೆ ‘ಮದಗಜ’ ಸಿನಿಮಾ ಒಟಿಟಿ ಕದ ತಟ್ಟಿದೆ.

****

Exit mobile version