ಶಾರೂಕ್ ಪುತ್ರ ಆರ್ಯನ್ ಬಂಧನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಟಿ ರಮ್ಯ..!

ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಅವರನ್ನು ಎನ್​ಸಿಬಿ ಬಂಧಿಸಿದೆ. ಈ ವಿಚಾರದ ಬಗ್ಗೆ ರಮ್ಯಾ ಅನುಮಾನ ವ್ಯಕ್ತಪಡಿಸಿದ್ದಾರೆ. ‘ಆರ್ಯನ್ ಖಾನ್ ಬಳಿ ಡ್ರಗ್​ ಇರಲಿಲ್ಲ ಮತ್ತು ಅವರು ಡ್ರಗ್ಸ್​​ ಸೇವಿಸಿದ ಬಗ್ಗೆ ದಾಖಲೆ ಇಲ್ಲ. ಆದಾಗ್ಯೂ, ಅವರ ಬಂಧನ ನಡೆದಿದೆ. ಮತ್ತೊಂದೆಡೆ ಬಿಜೆಪಿ ಸಚಿವರ ಮಗನಿದ್ದಾನೆ. ಅವರು 4 ರೈತರನ್ನು ಕೊಂದಿದ್ದಾರೆ, ಆದರೆ ಬಂಧನ ಮಾತ್ರ ಆಗಿಲ್ಲ. ಮೃತರ ಕುಟುಂಬವನ್ನು ಪ್ರಿಯಾಂಕಾ ಗಾಂಧಿ ಭೇಟಿ ಮಾಡಲು ಹೊರಟಾಗ ನೀವು ಅವರನ್ನು ಬಂಧಿಸಿದ್ದೀರಿ. ಇದು ಹೊಸ ಭಾರತ. ಅಧಿಕಾರದಲ್ಲಿರುವ ಹುಚ್ಚಾಟಿಕೆಯಿಂದ ದೇಶ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಆದಾಗ್ಯೂ ಅವರನ್ನು ವಶಕ್ಕೆ ಪಡೆದಿದೆ.  ನ್ಯಾಯಾಲಯದಲ್ಲಿ ವಾಟ್ಸಾಪ್ ಚಾಟ್‌ಗಳನ್ನು ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ. ಇನ್ನು, ವಿಚಾರಣೆ ವೇಳೆ ಆರ್ಯನ್​ ಅವರು ಹೇಳಿದ್ದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಎನ್​ಸಿಬಿ ಹೇಳುತ್ತಿದೆ. ಇದರ ಜತೆಗೆ ಹೊರಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದೂ ಹೇಳುತ್ತಿದೆ. ವಿಚಾರಣೆ ವೇಳೆ ದೀಪಿಕಾ ಪಡುಕೋಣೆ ಸಾಕಷ್ಟು ಬಾರಿ ಅತ್ತರು, ಆರ್ಯನ್​ ಖಾನ್​ ಅತ್ತಿದ್ದಾರೆ ಎಂಬಿತ್ಯಾದಿ ಗಾಸಿಪ್​ ಹರಡೋದು ಅವರಿಗೆ ಇಷ್ಟ ಎನಿಸುತ್ತದೆ. ಪ್ರಶ್ನೆ ಮಾಡುವಾಗ ಅಲ್ಲಿ ಯಾರೂ ಇರುವುದಿಲ್ಲ. ಆದಾಗ್ಯೂ ಇದು ಮಾಧ್ಯಮಗಳಿಗೆ ಹೇಗೆ ಸಿಕ್ಕಿತು?’ ಎಂದು ರಮ್ಯಾ ಪ್ರಶ್ನಿಸಿದ್ದಾರೆ.

****

Exit mobile version