Site icon Kannada Pichchar

‘ಶಬರಿ ಸರ್ಚಿಂಗ್ ಫಾರ್ ರಾವಣ’ ಹೊಸ ಲುಕ್ನಲ್ಲಿ ಕಾಣಿಸಿಕೊಂಡ ಡಿಂಪಲ್ ಕ್ವೀನ್..!

ಸ್ಯಾಂಡಲ್​ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಜನ್ಮದಿನದ ಹಿನ್ನೆಲೆಯಲ್ಲಿ ಶಬರಿ ಸರ್ಚಿಂಗ್ ಫಾರ್ ರಾವಣ ಚಿತ್ರತಂಡ ಸಿನಿಮಾದ ಪೋಸ್ಟರ್ ರಿವೀಲ್ ಮಾಡಿದೆ.ಶಬರಿ ತಂಡ ರಿಲೀಸ್ ಮಾಡಿರುವ ಪೋಸ್ಟರ್ ನಲ್ಲಿ ರಚಿತಾ ಹೊಸಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಚಿತಾ ಮೊದಲ ಬಾರಿಗೆ ಶಾರ್ಟ್ ಹೇರ್ ಕಟ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಸಿನಿಮಾದಲ್ಲಿ ಆಫೀಸರ್ ಪಾತ್ರದಲ್ಲಿ ರಚಿತಾ ನಟಿಸುತ್ತಿದ್ದಾರೆ.

ಪೋಸ್ಟರ್​ನಲ್ಲಿ ಅಭಿಮಾನಿಗಳಿಗೆ ಬಹುದೊಡ್ಡ ಅಚ್ಚರಿ ಎದುರಾಗಿದೆ. ಕಾರಣ, ರಚಿತಾ ಇದುವರೆಗೂ ಕಾಣಿಸಿಕೊಳ್ಳದ ಗೆಟಪ್​ನಲ್ಲಿ ಮಿಂಚುತ್ತಿದ್ದಾರೆ. ಸಣ್ಣ ಕೂದಲಿನ ಮಾಸ್ ಲುಕ್​ನಲ್ಲಿದ್ದು, ಅವರ ಟೇಬಲ್​ನಲ್ಲಿ ಒಂದು ಮುದ್ದಾದ ಬೆಕ್ಕೂ ಇದೆ. ಆಫೀಸರ್​ ಲುಕ್​ನಲ್ಲಿ ರಚಿತಾ ಕುಳಿತಿರುವುದು ಅವರ ಇದುವರೆಗಿನ ಚಿತ್ರಗಳಿಂದ ಇದು ಕಂಪ್ಲೀಟ್ ಡಿಫರೆಂಟ್ ಎನ್ನುವುದನ್ನು ಒತ್ತಿ ಹೇಳುತ್ತಿದೆ.

‘ಶಬರಿ ಸರ್ಚಿಂಗ್ ಫಾರ್ ರಾವಣ’ ಚಿತ್ರವನ್ನು ನವೀನ್ ಶೆಟ್ಟಿ ನಿರ್ದೇಶಿಸುತ್ತಿದ್ದು, ರಿವೆಂಜ್ ಥ್ರಿಲ್ಲರ್ ಮಾದರಿಯ ಕಥಾನಕ ಹೊಂದಿರಲಿದೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದು, ವಿಶಾಲ್ ಕುಮಾರ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಚಿತಾ ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಘು ಮುಖರ್ಜಿ, ಅರ್ಚನಾ ಕೊಟ್ಟಿಗೆ ಮೊದಲಾದವರು ಬಣ್ಣ ಹಚ್ಚುತ್ತಿದ್ದಾರೆ.

****

Exit mobile version