ಲಕ ಲಕ ಪ್ರೊಡ್ಯೂಸರ್‌ ಮಾಡ್ತಿದ್ದಾರೆ ಶಿವಣ್ಣನ ಪಿಚ್ಚರ್‌..!

ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್‌ ಅಭಿನಯದ ಹೊಸ ಸಿನಿಮಾಕ್ಕೆ ಚಂದನ್ ಶೆಟ್ಟಿ ಆಲ್ಬಂ ಸಾಂಗ್‌ ಗೆ ಹಣ ಹಾಕಿದ್ದ ನಿರ್ಮಾಪಕ ಆರ್‌.ಕೇಶವ್‌ ಹಣ ಹಾಕ್ತಿದ್ದಾರೆ. ೭೦ರ ದಶಕದ ರೆಟ್ರೋ ಕಥೆ ಇರೋ ಈ ಸಿನಿಮಾ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗ್ತಾ ಇದೆ. ಈ ಸಿನಿಮಾ ಕನ್ನಡ ಸೇರಿದಂತೆ ಹಲುವು ಭಾಷೆಗಳಲ್ಲಿ ನಿರ್ಮಾಣವಾಗ್ತಾ ಇದೆ.

ಇತ್ತೀಚೆಗೆ ಬಿಡುಗಡೆಯಾದ ಚಂದನ್ ಶೆಟ್ಟಿ – ರಚಿತಾರಾಮ್ ಕಾಂಬಿನೇಶನ್ ನ “ಲಕಲಕ‌‌ ಲ್ಯಾಂಬರ್ಗಿನಿ” ಆಲ್ಬಮ್ ಸಾಂಗ್ ಎಲ್ಲರ ಮನಗೆದ್ದಿತ್ತು. ಇಲ್ಲಿಯವರೆಗೂ ಬಂದಿರೋ ಆಲ್ಬಂ ಸಾಂಗ್ ಗಳಲ್ಲಿ ಕಾಸ್ಟ್ಲಿ ಆಲ್ಬಂ ಸಾಂಗ್‌ ಇದು.ಇಂತಹ ಅದ್ದೂರಿ ಆಲ್ಬಂ ಸಾಂಗ್ ಅನ್ನು ತಮ್ಮ ಮಗಳು ಬಿಂದ್ಯಾ ಹುಟ್ಟುಹಬ್ಬಕ್ಕಾಗಿ ಆರ್ ಕೇಶವ್‌ ನಿರ್ಮಾಣ ಮಾಡಿದ್ರು.ಈಗ ಕೇಶವ್‌ ಸಿನಿಮಾ ನಿರ್ಮಾಣಕ್ಕೆ ‌ಮುಂದಾಗಿದ್ದಾರೆ. ಬಿಂದ್ಯಾ‌‌ ಮೂವೀಸ್ ಮೂಲಕ ಅಪಾರ ವೆಚ್ಚದಲ್ಲಿ ಅದ್ದೂರಿ ಈ ಚಿತ್ರ ಮೂಡಿಬರಲಿದೆ.

ʻಬುದ್ದಿವಂತ 2ʼ ಚಿತ್ರದ ನಿರ್ದೇಶಕ ಆರ್. ಜಯರಾಂ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರ ಹೆಸರನ್ನು ಆರ್ ಜೈ ಎಂದು ಬದಲಿಸಿಕೊಂಡಿದ್ದಾರೆ. ಇಷ್ಟ್ರಲ್ಲೇ ಸಿನಿಮಾದ ಟೆಕ್ನಿಕಲ್‌ ಡಿಪಾರ್ಟ್‌ಮೆಂಟ್‌ ಹಾಗೂ ಸ್ಟಾರ್‌ಕಾಸ್ಟ್‌ ಬಗ್ಗೆ ಮಾಹಿತಿ ನೀಡಲಿದೆ ಸಿನಿಮಾ ಟೀಮ್‌.ಮುಂದಿನ ತಿಂಗಳು ಚಿತ್ರದ ಮೋಷನ್‌ ಪೋಸ್ಟರ್ ಬಿಡುಗಡೆ ಹಾಗೂ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ.

Exit mobile version