ರಿಲೀಸ್ ಡೇಟ್ ಫಿಕ್ಸ್ ಮಾಡಿದ ‘ಪುಷ್ಟ’ಡಿಸೆಂಬರ್ 17ಕ್ಕೆ ಅಲ್ಲು ಫ್ಯಾನ್ ಗೆ ಹಬ್ಬ..!

ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವೇ ಪುಷ್ಪ. ಈ ಸಿನಿಮಾದ ಸಣ್ಣ ಸಣ್ಣ ಅಪ್‍ಡೇಟ್‍ಗಳಿಗೆ ಮಿಲಿಯನ್‍ಗಟ್ಟಲೇ ಪ್ರತಿಕ್ರಿಯೆಗಳು ದೊರೆತಿದೆ. ಇದೀಗ ಸಿನಿಮಾ ತಂಡ ಮತ್ತೊಂದು ಅಪ್‍ಡೇಟ್ ನೀಡಿದ್ದು, ಇದು ಅಭಿಮಾನಿಗಳಿಗೆ ಹಬ್ಬವೇ ಸರಿ.ಹೌದು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಪುಷ್ಪ ಸಿನಿಮಾ ಡಿಸೆಂಬರ್ 17 ರಂದು ತೆರೆಕಾಣಲಿದೆ. ಪಂಚ ಭಾಷೆಗಳಾದ ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಯ ಜೊತೆಗೆ ಇದೇ ಸಿನಿಮಾದ ಇನ್ನೊಂದು ಪೋಸ್ಟರ್ ಅನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದ್ದಾರೆ.

ಪುಷ್ಪ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಲು ಹಲವು ಕಾರಣಗಳಿವೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​ ಅವರು ಲಾರಿ ಡ್ರೈವರ್​ ಪಾತ್ರ ಮಾಡಿದ್ದಾರೆ. ಅವರ ಲುಕ್​ ರಗಡ್​ ಆಗಿದೆ. ಖ್ಯಾತ ನಿರ್ದೇಶಕ ಸುಕುಮಾರ್​ ಅವರು ರಕ್ತಚಂದನ ಕಳ್ಳಸಾಗಾಣಿಕೆಯ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಎರಡು ಪಾರ್ಟ್​ನಲ್ಲಿ ‘ಪುಷ್ಪ’ ಮೂಡಿಬರುತ್ತಿದ್ದು, ಸಿನಿಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

****

Exit mobile version