News

ರಣರಂಗದಲ್ಲಿ ಅಧೀರ .. ಸಂಜಯ್ ಬರ್ತ್ ಡೇ ಗೆ ಸ್ಪೆಷಲ್ ಪೋಸ್ಟರ್ ಬಿಡುಗಡೆ

ರಣರಂಗದಲ್ಲಿ ಅಧೀರ .. ಸಂಜಯ್ ಬರ್ತ್ ಡೇ ಗೆ ಸ್ಪೆಷಲ್ ಪೋಸ್ಟರ್ ಬಿಡುಗಡೆ
  • PublishedJuly 29, 2021

ಸಂಜಯ್ ದತ್ ಹುಟ್ಟುಹಬ್ಬಕ್ಕೆ ಬಹುನಿರೀಕ್ಷೆಯ ಕೆಜಿಎಫ್-2 ಸಿಮಿಮಾದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ. ಸಂಜಯ್ ದತ್ ಹುಟ್ಟುಹಬ್ಬಕ್ಕೆ ಕೆಜಿಎಫ್-2ನಿಂದ ವಿಶೇಷ ಉಡುಗೊರೆ ಸಿಗಲಿದೆ ಎಂದು ಅಭಿಮಾನಿಗಳು ತಿಂಗಳಿಂದ ಕಾಯುತ್ತಿದ್ದರು. ಅದರಂತೆ ಕೆಜಿಎಫ್-2 ತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಂಜಯ್ ದತ್ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.

ತಮ್ಮ 62ನೇ ವರ್ಷದ ಹುಟ್ಟು ಹಬ್ಬವನ್ನ ಚರಿಸಿಕೊಳ್ಳುತ್ತಿರುವ ಮುನ್ನಾ ಬಾಯ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ,ಕೆಜಿಎಫ್-2ನಲ್ಲಿ ಸಂಜಯ್ ದತ್ ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ಯಂತ ಕ್ರೂರಿ ವಿಲನ್ ಪಾತ್ರಕ್ಕೆ ಬಣ್ಣಹಚ್ಚಿರುವ ಸಂಜಯ್ ದತ್ ಭಯಾನಕ ಲುಕ್ ಅಭಿಮಾನಿಗಳನ್ನು ಬೆಚ್ಚಿಬೀಳಿಸುವಂತಿದೆ. ಖಡ್ಗ ಹಿಡಿದು ಎಂಟ್ರಿ ಕೊಟ್ಟಿರುವ ಅಧೀರ ಸಂಜಯ್ ದತ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈ ಹಿಂದೆ ನಟ ಯಶ್ ಅವರ ಹುಟ್ಟು ಹಬ್ಬಕ್ಕೆ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರ ತಂಡ ಅಧೀರನ ಮುಖ ತೋರಿಸಿರಲಿಲ್ಲ, ಈಗ ಸಂಜಯ್ ಬರ್ತಡೇ ಗೆ ಬಿಡುಗಡೆ ಮಾಡಿರುವ ಪೋಸ್ಟರ್ ಸದ್ದು ಮಾಡುತ್ತಿದೆ.

Written By
Kannadapichhar

Leave a Reply

Your email address will not be published. Required fields are marked *