ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಭೇದಿಸಿದ ಪೋಲೀಸರಿಗೆ 1ಲಕ್ಷ ಬಹುಮಾನ ನೀಡಿದ ನಟ ಜಗ್ಗೇಶ್

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಭೇದಿಸಿರುವ ಕರ್ನಾಟಕ ಪೊಲೀಸರಿಗೆ ಸ್ಯಾಂಡಲ್ ವುಡ್ ನ ನವರಸ ನಾಯಕ ಜಗ್ಗೇಶ್‌ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

ಈ ಕುರಿತು ಶನಿವಾರ ಟ್ವೀಟ್‌ ಮಾಡಿರುವ ಅವರು, ‘ಕಾಲೇಜು ವಿಧ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಕಾಮಪಿಪಾಸುಗಳನ್ನು ಬಂಧಿಸಿದ ಕರುನಾಡಿನ ಹೆಮ್ಮೆಯ ಆರಕ್ಷಕರಿಗೆ ನನ್ನ ಅಭಿನಂದನೆಗಳು’ ಎಂದು ತಿಳಿಸಿದ್ದಾರೆ.


ಗೃಹ ಸಚಿವ ಅಗರ ಜ್ಞಾನೇಂದ್ರ ಅವರಿಗೆ 1 ಲಕ್ಷ ರೂಗಳ ಚೆಕ್ ನೀಡುತ್ತಿರುವ ನಟ ಜಗ್ಗೇಶ್ ದಂಪತಿಗಳು

‘ನಮ್ಮ ರಾಜ್ಯದ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಕಡೆಯಿಂದ ಪ್ರಕರಣ ಭೇದಿಸಿರುವ ನಲ್ಮೆಯ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ ನೀಡಲಿದ್ದೇನೆ. ನಿಮ್ಮ ಸಾರ್ಥಕ ಸೇವೆ ಹೀಗೆ ಮುಂದುವರಿಯಲಿ. ರಾಷ್ಟ್ರಕ್ಕೆ ಮಾದರಿ ನಮ್ಮ ಪೊಲೀಸ್‌’ ಎಂದು ಅವರು ಟ್ವೀಟ್‌ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ.

ಒಂದು ಲಕ್ಷ ರೂ ಚೆಕ್ ಅನ್ನು ಗೃಹ ಸಚಿವರಾದ ಅಗರ ಜ್ಞಾನೇಂದ್ರ ಅವರಿಗೆ ನೀಡಿರುವ ಪರಿಮಳ ಜಗ್ಗೇಶ್ ದಂಪತಿಗಳು ಕರ್ನಾಟಕ ಪೋಲೀಸರನ್ನು ಅಭಿನಂಧಿಸಿದ್ದಾರೆ.

****

Exit mobile version