ಭಜರಂಗಿ 2 ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್, ಸಕತ್ ಲುಕ್ ನಲ್ಲಿ ಭಾವನಾ ಮೆನನ್..!

ಹರ್ಷ ನಿರ್ದೇಶನದ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾದ ನಾಯಕಿಯ ಪೋಸ್ಟರ್ ಬಿಡುಗಡೆಯಾಗಿದ್ದು, ಭಾವನಾ ಮೆನನ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ದೊಡ್ಡ ಕ್ಯಾನ್ವಾಸ್‌ನಲ್ಲಿ ‘ಭಜರಂಗಿ 2’ ಸಿದ್ಧವಾಗಿದ್ದು, ಶಿವರಾಜ್‌ಕುಮಾರ್‌ ಮತ್ತು ಎ. ಹರ್ಷ ಕಾಂಬಿನೇಷನ್‌ನಲ್ಲಿ ಈ ಹಿಂದೆ ಮೂಡಿಬಂದಿದ್ದ ‘ಭಜರಂಗಿ’ ಚಿತ್ರದ ಸೀಕ್ವೆಲ್‌ ಆಗಿ ಈ ಸಿನಿಮಾ ಸಿದ್ಧವಾಗಿದೆ.

ಅದ್ದೂರಿ ಸೆಟ್‌ಗಳು, ಬಹು ತಾರಾಗಣ, ಭರ್ಜರಿ ಆಯಕ್ಷನ್ ದೃಶ್ಯಗಳಿಂದಾಗಿ ಟೀಸರ್‌ ಮೂಲಕವೇ ‘ಭಜರಂಗಿ 2’ ಎಲ್ಲರ ಮನ ಗೆದ್ದಿತು. ಈ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಚಿತ್ರದಲ್ಲಿ ಶ್ರುತಿ, ಸೌರವ್ ಲೋಕೇಶ್, ಶಿವರಾಜ್.ಕೆ.ಆರ್.ಪೇಟೆ ಸೇರಿದಂತೆ ದೊಡ್ಡ ತಾರಾಬಳಗವಿದೆ. ಭಜರಂಗಿ 2 ಚಿತ್ರ ಇದೇ ಅಕ್ಟೋಬರ್ 29 ರಂದು ತೆರೆಗೆ ಬರಲಿದೆ.

****

Exit mobile version