ಬನ್ನೂರಿನಲ್ಲಿ ‘ರೈಡರ್’ ಜಾತ್ರೆ

ನಿಖಿಲ್ ಕುಮಾರಸ್ವಾಮಿ ಅಭಿನಯಿಸಿರುವ ‘ರೈಡರ್​’ ಚಿತ್ರ ಡಿ.24ರಂದು ಬಿಡುಗಡೆ ಆಗಿದ್ದು, ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ. ಇದೇ ಖುಷಿಯಲ್ಲಿ ಇಡೀ ಚಿತ್ರ ತಂಡ ರಾಜ್ಯದ ಬಹುತೇಕ ಚಿತ್ರಮಂದಿರಗಳಿಗೆ ಭೇಟಿ ನೀಡಿ ಸಿನಿಮಾವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡುತ್ತಿದ್ದಾರೆ.

YouTube player

ರೈಡರ್ ಚಿತ್ರತಂಡ ಇಂದು (ಡಿ.28) ಬನ್ನೂರಿನ ರತ್ನ ಮಹಲ್ ಚಿತ್ರಮಂದಿರಕ್ಕೆ ಭೇಟಿ ನೀಡಿತು. ಈ ವೇಳೆ ಬನ್ನೂರಿನ ಅಭಿಮಾನಿಗಳು ಚಿತ್ರ ತಂಡಕ್ಕೆ ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು. ಇನ್ನು ಚಿತ್ರಮಂದಿರದ ಬಳಿ ಬರುತ್ತಿದ್ದಂತೆ ನಿಖಿಲ್ ಕುಮಾರಸ್ವಾಮಿಗೆ ಬೃಹತ್ ಗಾತ್ರದ ಹಾರ ಹಾಕಿ ಜೈಕಾರ ಹಾಕಿದರು.

ರೈಡರ್ ಚಿತ್ರಕ್ಕೆ ಒಳ್ಳೇಯ ರೆಸ್ಪಾನ್ಸ್ ಸಿಕ್ಕಿದ್ದು, ಕಲೆಕ್ಷನ್ ನಲ್ಲಿ ಬೆಳವಣಿಗೆ ‌ಕಾಣುತ್ತಿದೆ. ನಾನು ಮಾಡಿರುವ ಚಿತ್ರಗಳಲ್ಲಿ ಇದು ವಿಷಯ ಇರೋ ಚಿತ್ರ ಪ್ರೇಕ್ಷಕರು ಕೂಡ ಉತ್ತಮ ರೀತಿಯ ಪ್ರತಿಕ್ರಿಯೆ ಕೊಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ರೈಡರ್ ಸಿನಿಮಾ ವನ್ನು ಪೈರಸಿ ಮಾಡಿರುವ ಕುರಿತು ಈಗಾಗಲೇ ಸೈಬರ್ ಕ್ರಂ ಗೆ ದೂರು ನೀಡಿದ್ದು, ಕೃತ್ಯದ ಹಿಂದಿರುವ ಕಿಡಿಗೇಡಿಗಳಿಗೆ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು. ಎಲ್ಲರೂ ಥಿಯೇಟರ್ ಗೆ ಬಂದು ಸಿನಿಮಾ ನೋಡುವಂತೆ ಮನವಿ ಮಾಡಿದ್ರು.

ಬಂದ್ ಮಾಡುವುದರಿಂದ ಅನಾನುಕೂಲವಾಗಬಾರದು, ಬಂದ್ ನಿಂದ ಜನರಿಗೆ ಎಷ್ಟು ಅನುಕೂಲವಾಗುತ್ತೆ ಅಂತಾ ಯೋಚನೆ‌ ಮಾಡಬೇಕು. ಪ್ರಚಾರ ಮಾಡಲು ಬಂದ್ ಮಾಡಿ  ಜನಸಾಮಾನ್ಯರಿಗೆ ತೊಂದರೆ ಕೊಡಬಾರದು. 31 ಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಚಿತ್ರರಂಗಕ್ಕೆ ಸಾಕಷ್ಟು ಹೊಡೆತ ಆಗುತ್ತೆ ಎಂದರು.

****

Exit mobile version