ಫೆ 4ಕ್ಕೆ ಗಜಾನನ & ಗ್ಯಾಂಗ್ ಬೆಳ್ಳಿ ತೆರೆಗೆ ಎಂಟ್ರಿ

ಸ್ಯಾಂಡಲ್ ವುಡ್ ನಲ್ಲಿ ಭರವಸೆ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೀ ಮಹಾದೇವ್ ಹಾಗೂ ನಟಿ ಅದಿತಿ ಪ್ರಭುದೇವ ನಟನೆಯ ‘ಗಜಾನನ and ಗ್ಯಾಂಗ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫೆಬ್ರವರಿ 4ರಂದು‌ ಬೆಳ್ಳಿತೆರೆಗೆ ಗಜಾನನ and ಗ್ಯಾಂಗ್ ಸಿನಿಮಾ ಎಂಟ್ರಿ‌ ಕೊಡ್ತಿದೆ. 

ಟ್ರೇಲರ್ ಹಾಗೂ ಸಾಂಗ್ ಮೂಲಕ ಗಜಾನನ and ಗ್ಯಾಂಗ್ ಸಿನಿಮಾ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ‘ನಮ್ ಗಣಿ ಬಿಕಾಂ ಪಾಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ ‘ಗಜಾನನ and ಗ್ಯಾಂಗ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

Exit mobile version