Site icon Kannada Pichchar

‘ಪುನೀತ್ ರಾಜಕುಮಾರ್’ ನೆನೆಪಿನಲ್ಲಿ ಸೈಕಲ್ ಜಾಥಾ

ಪುನೀತ್​ ರಾಜ್​ಕುಮಾರ್​ ಸ್ಮರಣಾರ್ಥ ಬೆಂಗಳೂರಿನಲ್ಲಿ ಇಂದು (ನ.21) ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಸೈಕಲ್​ ಜಾಥಾ ನಡೆಸಲಾಗಿದೆ. ಅದಕ್ಕೆ ಶಿವರಾಜ್​ಕುಮಾರ್​ ಚಾಲನೆ ನೀಡಿದರು.

ದೈಹಿಕವಾಗಿ ಅಪ್ಪು ನಮ್ಮಿಂದ ದೂರವಾಗಿದ್ದರೂ ಅವರ ನೆನೆಪು ಜನಮಾನಸದಲ್ಲಿ ಅಜರಾಮರ, ನಾಡಿನಾದ್ಯಂತ ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಒಂದಲ್ಲಾ ಒಂದು ರೀತಿಯ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇಂದು ಕೂಡ ಪೊಲೀಸ್ ಇಲಾಖೆಯ ವತಿಯಿಂದ ಪುನೀತ್ ರಾಜಕುಮಾರ್ ಸ್ಮರಣಾರ್ಥ ಸೈಕಲ್ ಜಾಥಾವನ್ನು ಹಮ್ಮಿಕೊಂಡಿದೆ.

ಕಂಠೀರವ ಸ್ಟುಡಿಯೋದಲ್ಲಿ ಮೊದಲು ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಸೈಕಲ್ ಜಾಥಾ ಕ್ಕೆ ಶಿವರಾಜಕುಮಾರ್ ಚಾಲನೆ ನೀಡಿದರು.  ಪುನೀತ್ ರಾಜಕುಮಾರ್ ಗೆ ಸೈಕಲ್ ಮತ್ತು ಸೈಕ್ಲಿಂಗ್ ಎಂದರೆ ಅಚ್ಚು ಮೆಚ್ಚು. ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಸ್ನೇಹಿತರ ಬಳಗದೊಂದಿಗೆ ನೂರಾರು ಕಿ.ಮೀ ಸೈಕ್ಲಿಂಗ್ ಹೋಗುತ್ತಿದ್ದರು. ‘ಪುನೀತ್​ಗೂ ಸೈಕಲ್​ ಎಂದರೆ ತುಂಬ ಇಷ್ಟ. ಆ ವಿಚಾರದಲ್ಲಿ ಅವನು ನನಗೆ ಸ್ಫೂರ್ತಿ ಆಗಿದ್ದ. ನನ್ನ ಹುಟ್ಟುಹಬ್ಬಕ್ಕೆ ಒಮ್ಮೆ ಸೈಕಲ್​ ಗಿಫ್ಟ್​ ಮಾಡಿದ್ದ’ ಎಂದು ವಿಶೇಷ ನೆನಪನ್ನು ಮೆಲುಕು ಹಾಕಿ ಅವರು ಭಾವುಕರಾದರು ಶಿವಣ್ಣ’ ಹಾಗಾಗಿ ಅವರ ನೆನೆಪಿನಲ್ಲಿ ಇಂದು ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಜಾಥಾ ನಡೆಸಲಾಗಿದೆ.

****

Exit mobile version