ನಿನ್ನೆ ಕ್ಯಾನ್ಸಲ್ ಆಗಿದ್ದ ‘ಸಖತ್’ ಚಿತ್ರದ ಪ್ರಿಮಿಯರ್ ಶೋ ಇಂದು (ಡಿ.2) ಸಂಜೆ 6.30ಕ್ಕೆ

ಸಿಂಪಲ್‌ ಸುನಿ ನಿರ್ದೇಶನದ, ಕೆವಿಎನ್‌ ಪ್ರೊಡಕ್ಷನ್‌ ಸಂಸ್ಥೆ ನಿರ್ಮಾಣದ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ ‘ಸಖತ್‌’ಸಿನಿಮಾ ನ.26 ರಂದು ಬಿಡುಗಡೆಯಾಗಿ ಸಿನಿ ಪ್ರೇಕ್ಷಕರನ್ನು ನಗಿಸಲು ಗಣೇಶ್ ಸಖತ್ ಬಾಲು ಆಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

ಚಿತ್ರ ಬಿಡುಗಡೆಗೂ ಮುನ್ನ ಪ್ರೀ ರಿಲೀಸ್‌ ಈವೆಂಟ್‌  ಅನ್ನು ಅದ್ದೂರಿಯಾಗಿ ನೆರವೇರಿಸಿತ್ತು. ಚಿತ್ರ ಬಿಡುಗಡೆಯಾಗಿ ಒಂದು ವಾರ ಪೂರೈಸುತ್ತಿರುವ ವೇಳೆಯಲ್ಲಿ ಸೆಲೆಬ್ರೆಟಿ ಶೋ ಫಿಕ್ಸ್ ಮಾಡಿದೆ ಚಿತ್ರ ತಂಡ. ಒರಾಯನ್ ಮಾಲ್ ನ ಪಿವಿಆರ್ ನಲ್ಲಿ ನಿನ್ನೆ (ಡಿ.1) ರಂದು ನಡೆಯಬೇಕಿತ್ತು, ಕಾರಣಾಂತರಗಳಿಂದ ನೆನ್ನೆ ನಡೆಯಬೇಕಿದ್ದ ಸೆಲೆಬ್ರಟಿ ಶೋ ಕ್ಯಾಂಸಲ್ ಆಗಿತ್ತು. ಶೋ ಕ್ಯಾನ್ಸಲ್ ಆದ ಕಾರಣ ನಿರ್ದೇಶಕ ಸಿಂಪಲ್ ಸುನಿ ಎಲ್ಲರಲ್ಲಿ ಕ್ಷಮೆ ಕೇಳಿ ವೀಡಿಯೋ ಒಂದನ್ನು ಶೇರ್ ಮಾಡಿದ್ದರು.

ನೆನ್ನೆ (ಡಿ.1) ನಡೆಯಬೇಕಿದ್ದ ಸೆಲೆಬ್ರೆಟಿ ಶೋ ಇಂದು ಗುರುವಾರ (ಡಿ.2) ಸಂಜೆ 6.30ಕ್ಕೆ  ಡಾ ರಾಜಕುಮಾರ್ ರಸ್ತೆಯಲ್ಲಿರುವ ಒರಾಯನ್ ಮಾಲ್ ಪಿವಿಆರ್ ನಲ್ಲಿ ನಡೆಯಲಿದೆ ಎಂದು ಚಿತ್ರ ತಂಡ ಅನೌನ್ಸ್ ಮಾಡಿದೆ.

“ಸಖತ್ celebrity ಶೋ” ಇಂದು ಸಂಜೆ 6;30pm fix ಆಗಿದೆ…ನೆನ್ನೆಯ ಅಡಚಣೆಗೆ ವಿಷಾದ ಕೋರುತ್ತ…ಇಂದಿನ ಶೋ ಯಶಸ್ವಿಯಾಗಲು ತಾವುಗಳು ಆಗಮಿಸಬೇಕೆಂದು ಕೋರುತ್ತೇನೆ.. ನಿಮ್ಮ ಆಗಮನದ ನಿರೀಕ್ಷೆಯಲ್ಲಿ                                                                                       –                      -ಸಖತ್ ಚಿತ್ರತಂಡ-

Exit mobile version