Site icon Kannada Pichchar

ನಟಿ ವಿಜಯಲಕ್ಷ್ಮಿ ತಾಯಿ ನಿಧನ

ನಟಿ ವಿಜಯಲಕ್ಷ್ಮಿ ಜೀವನದಲ್ಲಿ ದೊಡ್ಡ ಆಘಾತವೊಂದು ನಡೆದಿದೆ. ವಿಜಯಲಕ್ಷ್ಮಿ ತಾಯಿ ವಿಜಯಾ ಸುಂದರಂ ಇಹಲೋಕ ತ್ಯಜಿಸಿದ್ದಾರೆ‌. ತಾಯಿ ವಿಜಯಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗಾಂಧಿನಗರದ ಸಂತೃಪ್ತಿ ಹೋಟೆಲ್​​ನಲ್ಲಿ ವಿಜಯಲಕ್ಷ್ಮಿ ಕುಟುಂಬ ವಾಸವಾಗಿತ್ತು. ಚೆನ್ನೈಗೆ ಹೋಗುವ ಸಿದ್ಧತೆಯಲ್ಲಿದ್ದ ವಿಜಯಲಕ್ಷ್ಮಿಗೆ ತಾಯಿ ಸಾವಿನಿಂದ ಆತಂಕಕ್ಕೆ ಒಳಗಾಗಿದ್ದಾರೆ.

ವಿಜಯಲಕ್ಷ್ಮಿ ಅವರು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ  ಕಾರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಕಾರ್ಯದರ್ಶಿ ಬಾ.ಮಾ ಹರೀಶ್ ಹೋಟೆಲ್‌ಗೆ ತೆರಳಿ ಸಾಂತ್ವಾನ ಹೇಳಿ ಸಹಾಯ ಮಾಡಿದ್ದಾರೆ. ಮತ್ತು ನಟ ಅರ್ಜುನ್ ಗೌಡ ಅಂತ್ಯಕ್ರಿಯೆಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಘಟನೆ ಬಗ್ಗೆ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿದ್ದು ನನ್ನ ಅಕ್ಕನಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಮಾತನಾಡೋದು ಒರಟು ಅನ್ನಿಸಬಹುದು. ಅಕ್ಕನಿಗೆ ಎಲ್ಲಾ ರೀತಿಯ ಸೇವೆ ನಾನು ಮಾಡುತ್ತಿದ್ದೇನೆ. ಅಮ್ಮ ಬಿಟ್ಟು ಹೋದ ಮೇಲೆ ನಾನು ಬದಲಾಗುತ್ತೇನೆ. ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ ಇಲ್ಲೇ ಜೀವನ ಸಾಗಿಸುತ್ತೇನೆ. ಅಕ್ಕನಿಗೆ ಸಮಸ್ಯೆ ಆದಮೇಲೆ ಅಮ್ಮನಿಗೆ ಮಾನಸಿಕವಾಗಿ ನೊಂದಿದ್ದರು. ನೀವೆಲ್ಲಾ ಇದ್ದೀರಾ ನಾನು ಧೈರ್ಯವಾಗಿ ಇರುತ್ತೇನೆ. ಮಾಧ್ಯಮದವರ ಸಹಾಯ ಬೇಕು. ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ ಎಂದು ನಟಿ ವಿಜಯಲಕ್ಷ್ಮಿ ತಮ್ಮ ನೋವು ತೋಡಿಕೊಂಡಿದ್ದಾರೆ.ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿದ್ದ ವಿಜಯಲಕ್ಷ್ಮೀ ಇಂದು ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದಾರೆ.

****

Exit mobile version