ನಟಿ ರಶ್ಮಿಕಾ ಮಂದಣ್ಣಗೆ ಕನ್ನಡ ಸಿನಿಮಾ ಮಾಡಲು ಟೈಮ್ ಇಲ್ಲವಂತೆ..!

ಈಗಿರುವ ಪ್ರಾಜೆಕ್ಟ್ಗಳನ್ನು ಪೂರೈಸಲು ರಶ್ಮಿಕಾ ಗೆ ಸಮಯ ಸಾಲುತ್ತಿಲ್ಲವಂತೆ ಇನ್ನು ಕನ್ನಡ ಚಿತ್ರದಲ್ಲಿ ಮಾಡಲು ಒಪ್ಪಿಕೊಂಡರೆ ವರ್ಷದ 365 ದಿನಗಳು ಸಾಲುವುದಿಲ್ಲವಂತೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ ಈ ಬಗ್ಗೆ ಮಾತನಾಡಿದ್ದಾರೆ. ತೆಲುಗು ಮತ್ತು ಹಿಂದಿ ಸಿನಿಮಾಗಳಿಗಾಗಿ ಡೇಟ್ಸ್​ ಹೊಂದಿಸಲು ಅವರಿಗೆ ತುಂಬ ಕಷ್ಟ ಆಗುತ್ತಿದೆ. ಈ ಪ್ರಾಜೆಕ್ಟ್​ಗಳಿಗಾಗಿಯೇ ಅವರು ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಜೊತೆಗೆ ತಮಿಳು ಸಿನಿಮಾ ಕೂಡ ಮಾಡುತ್ತಿದ್ದಾರೆ. ಇದರ ನಡುವೆ ತಾವು ಕನ್ನಡ ಸಿನಿಮಾವನ್ನೂ ಮಾಡಿದರೆ ವರ್ಷದ 365 ದಿನವೂ ಸಾಕಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ವೃತ್ತಿಜೀವನ ಆರಂಭಿಸಿದ್ದು ಕನ್ನಡ ಚಿತ್ರರಂಗದಿಂದ. ಅವರಿಗೆ ಮೊಟ್ಟ ಮೊದಲ ಅವಕಾಶ ಸಿಕ್ಕಿದ್ದು ‘ಕಿರಿಕ್​ ಪಾರ್ಟಿ’ ಚಿತ್ರದಲ್ಲಿ. ಆ ಸಿನಿಮಾದ ಯಶಸ್ಸಿನ ಬಳಿಕ ರಶ್ಮಿಕಾ ರಾತ್ರೋರಾತ್ರಿ ಸ್ಟಾರ್​ ಆಗಿಬಿಟ್ಟರು. ಆದರೆ ಈಗ ಅವರು ಕನ್ನಡ ಸಿನಿಮಾ ಮಾಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ.

Exit mobile version