ಗಂಟುಮೂಟೆ ಸಿನಿಮಾ ಖ್ಯಾತಿಯ ನಿಶ್ಚಿತ್ ಕೊರೊಡಿ ಮತ್ತು ಮಾಯಾಬಜಾರ್ ನಾಯಕಿ ಚೈತ್ರಾ ರಾವ್ ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿರುವ ಟಾಮ್ ಆಂಡ್ ಜೆರ್ರಿ ಇಂದು (ನ 12) ತೆರೆ ಕಂಡಿದೆ. ಸಿನಿಮಾವನ್ನು ತೆರೆ ಮೇಲೆ ನೋಡಿರುವ ಪ್ರೇಕ್ಷಕ ಟಾಮ್ ಆಂಡ್ ಜೆರ್ರಿ ಆಟ, ಓಟವನ್ನು ಸೂಪರ್ ಎನ್ನುತ್ತಿದ್ದಾರೆ.
ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದಿರುವ ಟಾಮ್ ಆಂಡ್ ಜೆರ್ರಿ ಚಿತ್ರ ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಟಾಮ್ ಅಂಡ್ ಜೆರ್ರಿಯಲ್ಲಿ ತಾರಾ, ಜೈ ಜಗದೀಶ್, ರಂಗಾಯಣ ರಘು, ಕಡ್ಡಿಪುಡಿ ಚಂದ್ರು, ಪದ್ಮಜಾ ರಾವ್, ಗುಣಶೇಖರ್ ಮತ್ತು ಪ್ರಕಾಶ್ ತುಂಬಿನಾಡು ಸಹ ನಟಿಸಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸಂಕೇತ್ ನಿರ್ವಹಿಸಿದ್ದಾರೆ.
****