ಚಿತ್ರೀಕರಣ ಮುಗಿಸಿದ ‘ಏಕ್ ಲವ್ ಯಾ’

ಚಿತ್ರೀಕರಣ ಮುಗಿಸಿದ ‘ಏಕ್ ಲವ್ ಯಾ’

ಚಿತ್ರೀಕರಣ ಮುಗಿಸಿದ ‘ಏಕ್ ಲವ್ ಯಾ’

ನಿರ್ದೇಶಕ ಜೋಗಿ ಪ್ರೇಮ್ ನಿರ್ದೇಶನದ, ಏಕ್ ಲವ್ ಯಾ ದ ಚಿತ್ರೀಕರಣ ಮುಕ್ತಾಯವಾಗಿದ್ದು, ಕೊನೆಯ ದಿನದ ಚಿತ್ರೀಕರಣ ಮುತ್ತತ್ತಿ ಯಲ್ಲಿ ನಡೆದಿತ್ತು. ರಕ್ಷಿತಾ ಪ್ರೇಮ್ ಸಿನಿಮಾದ ನಿರ್ಮಾಪಕರಾಗಿದ್ದಾರೆ. ರಕ್ಷಿತಾ ಅವರ ಸಹೋದರ ರಾಣಾ ಚಿತ್ರದ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಇವರ ಜೊತೆಗೆ ರೇಷ್ಮಾ, ರಚಿತಾ ರಾಮ್, ನಿಧಿ ಮುಂತಾದವರ ತಾರ ಬಳಗವಿದೆ.


ಏಕ್ ಲವ್ ಯಾ.. ಚಿತ್ರದ ನಿರ್ಮಾಪಕಿ ರಕ್ಷಿತಾ ಅವರು ಹಂಚಿಕೊಂಡಿರುವ ಫೋಟೊಗಳು

ಕೊನೆಯ ದಿನದ ಚಿತ್ರೀಕರಣ ಮುತ್ತತ್ತಿ ಯಲ್ಲಿ ನಡೆದಿದ್ದು ಚಿತ್ರೀಕರಣ ಸ್ಥಳಕ್ಕೆ ಚಿತ್ರದ ಹೀರೋ ರಾಣಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್, ಸೂರಜ್ ಮುಂತಾದ ಕಲಾವಿದರು ಭಾಗವಹಿಸಿದ್ದರು. ‘ಏಕ್ ಲವ್ ಯಾ’ ಚಿತ್ರದ ಕೊನೆಯ ದಿನದ ಶೂಟಿಂಗ್ ಕುರಿತಾಗಿ ನಿರ್ಮಾಪಕಿ ರಕ್ಷಿತಾ ಪ್ರೇಮ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡು ಫೋಟೋಗಳನ್ನು ತಮ್ಮ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

Exit mobile version