“ಗ್ರೇ ಗೇಮ್ಸ್” ಚಿತ್ರಕ್ಕೆ ಚಾಲನೆ..!

ಸ್ಯಾಂಡಲ್ ವುಡ್ ನಲ್ಲಿ ನೂತನ ಚಿತ್ರಗಳ ಚಾಲನೆ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗಷ್ಟೇ ಹಿರಿಯ ನಿರ್ಮಾಪಕ , ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಚಿನ್ನೆಗೌಡ್ರ ಕುಟುಂಬವು ಸೇರಿದಂತೆ ಹಲವು ಗಣ್ಯರು ಅದ್ದೂರಿ ಮುಹೂರ್ತ ಸಮಾರಂಭದಲ್ಲಿ ಹಾಜರಾಗಿತ್ತು.

ತನ್ನ ಚಿಕ್ಕವಯಸ್ಸಿನಿಂದಲ್ಲೂ ಅಮೋಘ ಅಭಿನಯದಿಂದ ಮನೆ ಮಾತಾಗಿರುವ ವಿಜಯ ರಾಘವೇಂದ್ರ ಅಭಿನಯದ “ಗ್ರೇ ಗೇಮ್ಸ್” ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ಶ್ರೀ ಮುರಳಿ ಆರಂಭ ಫಲಕ ತೋರಿ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಬಿ.ಕೆ.ಶಿವರಾಂ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

“ಗ್ರೇ ಗೇಮ್ಸ್” ಸೈಬರ್ ಕ್ರೈಮ್ ಸುತ್ತ ನಡೆಯುವ ಕಥೆಯಾಗಿದ್ದು. ಸೈಕಲಾಜಿಸ್ಟ್ ಪಾತ್ರದಲ್ಲಿ ವಿಜಯ ರಾಘವೇಂದ್ರ ಅಭಿನಯಿಸುತ್ತಿದ್ದು. ಗ್ರೇ ಗೇಮ್ ಆಡುವ ಇಪ್ಪತ್ತು ವರ್ಷದ ಹುಡುಗನ ಪಾತ್ರದಲ್ಲಿ ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೈ ನಟಿಸುತ್ತಿದ್ದಾರೆ. ವರ್ಕ್ ಶಾಪ್ ಮೂಲಕ ಜೈ ಅವರಿಗೆ ಅಭಿನಯದ ತರಭೇತಿ ನೀಡಲಾಗಿದೆಯಂತೆ.‌ ಜೈ ಅವರ ತಾಯಿಯ ಪಾತ್ರದಲ್ಲಿ ಅಪರ್ಣ ಕಾಣಿಸಿಕೊಳ್ಳಲಿದ್ದಾರೆ.‌ ಸೈಬರ್ ಕೈಮ್ ನ ವಿಶೇಷ ಅಧಿಕಾರಿ ಪಾತ್ರವನ್ನು ಭಾವನಾ ರಾವ್ ಮಾಡಲಿದ್ದಾರೆ.

“ಗ್ರೇ ಗೇಮ್ಸ್” ಗೆ ಗಂಗಾಧರ್ ಸಾಲಿಮಠ್ ನಿರ್ದೇಶನ ಮಾಡುತ್ತಿದ್ದು, ವರುಣ್ ಅವರ ಛಾಯಾಗ್ರಹಣ, ಶ್ರೀಯನ್ಶ್ ಶ್ರೀರಾಮ್ ಹಾಗೂ ಡೋಲೇಶ್ವರ ರಾಜ್ ಸಂಕು ಸಂಗೀತ ನೀಡುತ್ತಿದ್ದಾರೆ. ದತ್ತಣ್ಣ ನಿರ್ಮಾಣ ನಿರ್ವಹಣೆ ಹಾಗೂ ರಂಜಿತ್ ಅವರ ಸಂಕಲನ ಈ ಚಿತ್ರಕ್ಕಿದೆ. ಡೋಲೇಶ್ವರ ರಾಜ್ ಸಂಕು, ಅರವಿಂದ್ ಜೋಷಿ, ಸತೀಶ್ ಗ್ರಾಮ್ ಪುರೋಹಿತ್ ಈ ಚಿತ್ರದ ಸಹ ನಿರ್ಮಾಪಕರು. ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಬಸವರಾಜ್ ಕೆಡದ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯುವಪಡೆಗಳ ಬಳಗ ಒಂದು ಉತ್ತಮ ಕಥೆಯನ್ನು ಸಿದ್ಧಪಡಿಸಿಕೊಂಡು ಚಿತ್ರ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ತಂಡ ನೀಡಲಿದೆಯoತೆ.

Exit mobile version