‘ಗರುಡ’ ಚಿತ್ರದ ಮತ್ತೊಂದು ಹಾಡು ಅಕ್ಟೋಬರ್ 15ಕ್ಕೆ ರಿಲೀಸ್..!

ಶ್ರೀನಗರ ಕಿಟ್ಟಿ, ಸಿದ್ಧಾರ್ಥ್ ಮಹೇಶ್, ಐಂದ್ರಿತಾ ರೇ ನಟನೆಯ “ಗರುಡ” ಸಿನಿಮಾದ  ‘ಈ ಸೀತೆಗೆ’ ಎಂಬ ಮತ್ತೊಂದು  ಭಾವ ಪೂರ್ಣ ಹಾಡು ಅಕ್ಟೋಬರ್ 15 ರಂದು ಬೆಳಗ್ಗೆ 9.33 ಕ್ಕೆ ಬಿಡುಗಡೆಯಾಗಲಿದೆ. ಈ ಹಾಡನ್ನು ರಘು ಧಿಕ್ಷಿತ್ ಯೂಟ್ಯೂಬ್ ಚಾನೆಲ್ ನಿಂದ ಬುಡುಗಡೆ ಮಾಡಲಾಗುತ್ತಿದೆ.

ಚಿತ್ರಕ್ಕೆ ಧನಕುಮಾರ್ ಅವರ ನಿರ್ದೇಶನವಿದ್ದು, ಆರೆಂಜ್ ಪಿಕ್ಸಲ್ಸ್ ಲಾಂಚನದಲ್ಲಿ, ಪ್ರಸಾದ್ ರೆಡ್ಡಿ, ರಾಜಾರೆಡ್ಡಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಜೈ ಆನಂದ್ ಅವರ ಛಾಯಾಗ್ರಹಣವಿದೆ. ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ ತೆರೆಯ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು ಮುಂದಿನ ಅಪ್ ಡೇಟ್ಸ್ ಗಳನ್ನು ಚಿತ್ರ ತಂಡ ನೀಡಲಿದೆ.

****

Exit mobile version