ಏನ್ ಕಥೆ ನಿಮ್ದು ‘ರಚಿತಾ’ ರಾಮ್ ರಾಮಾ..!

ಮೊನ್ನೆ (ನ 9) ಲವ್ ಯೂ ರಚ್ಚು ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಿತ್ತು, ಅದರ ಹಿಂದಿನ ದಿನ ಸಿನಿಮಾ ತಂಡ ರಚಿತಾ ರಾಮ್ ಮತ್ತು ಅಜಯ್ ರಾವ್ ಅವರ ಹಾಡಿನ ಪೋಸ್ಟರ್ ರಿಲೀಸ್ ಮಾಡಿತ್ತು, ಅದರಲ್ಲಿ ರಚಿತಾ ರಾಮ್ ಅವರ ಬಿಚ್ಚುಡುಗೆಯ ನಟನೆ ಕೆಲವರಿಗಂತೂ ಬಿಸಿ ಏರುವಂತೆ ಮಾಡಿತ್ತು. ಹಿಂದೆ ಉಪೇಂದ್ರ ಅವರ ಜೊತೆ ನಟಿಸಿದ್ದ  ‘ಐ ಲವ್ ಯೂ’ ಚಿತ್ರದಲ್ಲಿ ‘ಬಂಗಾರದಲ್ಲಿ ಬೊಂಬೆ ಮಾಡಿದ’ ಹಾಡಿಗೆ ರಚಿತಾ ರಾಮ್ ಮಾಡಿದ ಫರ್ಫಾರ್ಮೆನ್ಸ್ ಬಾರಿ ಚರ್ಚೆಗೆ ಕಾರಣವಾಗಿತ್ತು ಆ ಕಹಿ ಅನುಭವಗಳಿಂದ ಸಾಕಷ್ಟು ಮನ ನೊಂದಿದ್ದ ರಚ್ಚು ಇನ್ನು ಮುಂದೆ ಆ ರೀತಿಯ ಸನ್ನಿವೇಶಗಳಲ್ಲಿ ಅಭಿನಯಿಸುವುದಿಲ್ಲಾ ಎಂದು ಹೇಳಿದ್ದರು ಆದ್ರೆ ‘ಲವ್ ಯೂ ರಚ್ಚು’ ಚಿತ್ರ ಹಾಡಿನ ಸನ್ನಿವೇಶದಲ್ಲಿ ಅದೇ ರೀತಿಯ ಸೀನ್ ನಲ್ಲಿ ಕಾಣಿಸಿಕೊಂಡ ಕಾರಣ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಟಾಂಗ್ ಕೊಡಲು ಹೋಗಿ ರಚಿತಾ ರಾಮ್ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಸಮಜಾಯಿಷಿ ಕೊಡಲು ಬೇರೆ ರೀತಿಯ ಅವಕಾಶಗಳಿದ್ದರು ರಚ್ಚು ಮಾತನಾಡಿರುವ ದಾಟಿಯಿಂದ ಟೀಕೆಗೂ ಗುರಿಯಾಗಿದ್ದಾರೆ. ರಚ್ಚು ಅವರ ಈ ರಿಯಾಕ್ಷನ್ ನಿಂದ ‘ಲವ್ ಯೂ ರಚ್ಚು’ ಚಿತ್ರಕ್ಕೆ ಸಕತ್ ಪ್ರಮೋಶನ್ ಕೂಡ ಸಿಗುತ್ತಿದೆ.

ಇನ್ನೇನು ಇದೆಲ್ಲಾ ಮುಗೀತು ಅನ್ನುವಾಗ್ಲೆ ರಚಿತಾ ರಾಮ್​, ರಾಣಾ ನಟನೆಯ ‘ಏಕ್​ ಲವ್​ ಯಾ’ ಚಿತ್ರತಂಡ ಎಡವಟ್ಟು ಮಾಡಿಕೊಂಡಿದೆ. ಈ ಸಿನಿಮಾದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೆ ಅಗೌರವ ತೋರಿಸಲಾಗಿದೆ. ಇದು ಅಪ್ಪು ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಆಗಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ‘ಏಕ್​ ಲವ್​ ಯಾ’ ಚಿತ್ರತಂಡದವರು ಪುನೀತ್​ ಅವರ ಫೋಟೋ ಮುಂದೆ ಶಾಂಪೇನ್ ಓಪನ್​ ಮಾಡಿದ್ದಾರೆ. ಈಗ ಈ ಘಟನೆ ಕುರಿತು ರಚಿತಾ ರಾಮ್​ ಪ್ರತಿಕ್ರಿಯೆ ನೀಡಿದ್ದಾರೆ. ‘ಆ ರೀತಿ ಘಟನೆ ಆಗಿದ್ದಕ್ಕೆ ಕ್ಷಮೆ ಕೇಳ್ತೀನಿ’ ಎಂದು ಅವರು ಹೇಳಿದ್ದಾರೆ. ಪುನೀತ್​ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಚಿತ್ರತಂಡ ನಡೆದುಕೊಂಡಿರುವುದಕ್ಕೆ ರಚಿತಾ ಬೇಸರ ವ್ಯಕ್ತ ಪಡಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಈ ಘಟನೆ ಬಗ್ಗೆ ರಚಿತಾ ರಾಮ್​ ಸಮಜಾಯಿಷಿ ನೀಡಿದ್ದಾರೆ. ‘ನಿನ್ನೆಯ ಏಕ್​ ಲವ್​ ಯಾ ಸಿನಿಮಾದ ಸಾಂಗ್​ ಲಾಂಚ್​ ಕಾರ್ಯಕ್ರಮದಲ್ಲಿ ಶಾಂಪೇನ್​ ಬಾಟಲ್​ ಓಪನ್​ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನ ಆಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ ಕ್ಷಮೆ ಕೇಳುತ್ತೇನೆ. ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಆದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ’ ಎಂದು ರಚಿತಾ ಪೋಸ್ಟ್​ ಮಾಡಿದ್ದಾರೆ.

****

Exit mobile version