ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಆಯೋಜಿಸಲಾಗಿದ್ದ, ಪ್ರಿಯಾಂಕ ಉಪೇಂದ್ರ ಅಭಿನಯದ ‘1980’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಒಂದೇ ವೇದಿಕೆಯಲ್ಲಿ ಸುದೀಪ್ ಮತ್ತು ಉಪೇಂದ್ರ ಅವರನ್ನು ನೋಡಿರುವ ಅವರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ‘1980’ ಸಿನಿಮಾದ ಟ್ರೇಲರ್ ಕುರಿತು ಮಾತನಾಡಿದ ಕಿಚ್ಚ ಸುದೀಪ್ ‘ಪ್ಯಾರಲಲ್ ಯೂನಿವರ್ಸ್’ ಕುರಿತು 10 ವರ್ಷಗಳ ಹಿಂದೆಯೇ ಉಪೇಂದ್ರ ಮಾತನಾಡಿದ್ದನ್ನು ನಾನು ಕೇಳಿದ್ದೆ, ಮುಕುಂದ ಮುರಾರಿ ಶೂಟಿಂಗ್ ಸಮಯದಲ್ಲೂ ಫಿಲಾಸಫಿಕಲ್ ಮಾತುಗಳನ್ನ ಉಪೇಂದ್ರ ಹೇಳುತ್ತಿದ್ದರು ಆಗ ನನಗೆ ಒಂದು ಡೌಟ್ ಬರ್ತಿತ್ತು, ಕೃಷ್ಣ ನಾನಾ? ಉಪೇಂದ್ರನಾ? ಅಂತಾ..! ಹೇಳುತ್ತಾ ನೆನಪುಗಳನ್ನು ಮೆಲಕು ಹಾಕಿದರು.
‘1980’ ಸಿನಿಮಾ ‘ಪ್ಯಾರಲಲ್ ಯೂನಿವರ್ಸ್’ ಬಗ್ಗೆ ಹೇಳುತ್ತಿದ್ದೆ, ಸಿನಿಮಾಗಳನ್ನು ಈ ರೀತಿ ಬಿಗ್ ಸ್ಕ್ರೀನ್ ಮೇಲೆ ನೋಡುವುದೇ ದೊಡ್ಡ ಖುಷಿಯ ಕ್ಷಣ, ಕೊರೊನಾ ಕಾಲ ಎಲ್ಲವನ್ನು ನಮ್ಮಿಂದ ದೂರ ಮಾಡಿದೆ, ಮತ್ತೆ ಹಿಂದಿನ ವೈಭವ ಮರಳಿ ಬರುವಂತಾಗಲಿ ಎಂದು ಕಿಚ್ಚ ಶುಭ ಹಾರೈಸಿದರು.
****