ಇದ್ದಕ್ಕಿದ್ದಂಗೆ ಅಪ್ಪು ಜೊತೆಗಿನ ಫೋಟೋ ಶೇರ್ ಮಾಡಿದ ರಶ್ಮಿಕಾ ಮಂದಣ್ಣ..!

ರಶ್ಮಿಕಾ ಮಂದಣ್ಣ ಅಪ್ಪು ಅವರ ಪೋಟೋವನ್ನು ತಮ್ಮ ಇನ್ ​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಅಂಜನಿ ಪುತ್ರ ಸಿನಿಮಾದಲ್ಲಿ ಪುನೀತ್ ರಾಜಕುಮಾರ್​ ಜೊತೆ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಈ ಸಿನಿಮಾದ ‘ಬಾರಿ ಖುಷಿ ಮಾರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ’ ಸಾಂಗ್​ ಸೂಪರ್​ ಡೂಪರ್​ ಹಿಟ್​ ಆಗಿತ್ತು. ಅದೇ ಹಾಡಿನ ಫೋಟೊವೊಂದನ್ನು ರಶ್ಮಿಕಾ ಮಂದಣ್ಣ ಶೇರ್​ ಮಾಡಿದ್ದಾರೆ. ಜೊತೆಗೆ ಒಂದು ಹಾರ್ಟ್ ಸಿಂಬಲ್​ ಹಾಕಿದ್ದಾರೆ.

ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಪುನೀತ್ ರಾಜಕುಮಾರ್ ಜೊತೆಗಿನ ಫೋಟೋವೊಂದನ್ನು ತಮ್ಮ ಇನ್ಸ್ಟಾ ಸ್ಟೊರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರೋಲರ್ಸ್ ನಿಂದ ತಪ್ಪಿಸಿಕೊಳ್ಳಲು ರಶ್ಮಿಕಾ ಹೀಗೆ ಮಾಡಿದ್ರಾ? ಎಂಬ ಅನುಮಾನ ಮೂಡ್ತಿದೆ. ಈ ಹಿಂದೆ ಅಪ್ಪು ನಿಧನರಾದಗಿನಂದಲೂ ರಶ್ಮಿಕಾ ಮಂದಣ್ಣ ಅಪ್ಪು ಬಗ್ಗೆ ಏನು ಮಾತನಾಡಿಲಿಲ್ಲ. ಯಾವಾಗ ಕನ್ನಡಿಗರು ಈ ನಟಿಯನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಳ್ಳುವಾಗಲೇ, ರಶ್ಮಿಕಾ ಅಪ್ಪು ಅವರ ಪೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಅಕೌಂಟ್​ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಕಿರಿಕ್​ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಬ್ಯೂಟಿ, ಕರ್ನಾಟಕ ಕ್ರಶ್​ ಎನಿಸಿಕೊಂಡಿದ್ದರು. ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಇದೀಗ ನ್ಯಾಷನಲ್​ ಕ್ರಶ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಏನ್​ ಮಾಡಿದರು ಸುದ್ದಿಯಾಗುತ್ತೆ. ಅದರಲ್ಲೂ ಕನ್ನಡ ಬಗ್ಗೆ ನಟಿ ತೋರಿಸಿರುವ ನಿರ್ಲಕ್ಷ್ಯ ಮಾತ್ರ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲಿನಿಂದಲೂ ಕನ್ನಡ ಬಗ್ಗೆ ಮಾತನಾಡಿ ಟ್ರೋಲ್​ ಆಗಿದ್ದರು. ಪವರ್​ ಸ್ಟಾರ್​ ಅಪ್ಪು ನಿಧನರಾದಗಲೂ ಅವರ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದರು. ಇದು ಅಪ್ಪು ಅಭಿಮಾನಿಗಳ ಕಣ್ಣು ಕೆಂಪಗೆ ಮಾಡುವಂತೆ ಮಾಡಿತ್ತು.

ಪವರ್​​ ಸ್ಟಾರ್​ ಅಪ್ಪು ಅವರನ್ನು ನೆನೆದು ರಮ್ಯಾ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಅಪ್ಪು ಅಂತಿಮ ದರ್ಶನಕ್ಕೆ ಬಂದಿದ್ದ ರಮ್ಯಾ ಕಣ್ಣೀರಿಟಿದ್ದರು. ಅಪ್ಪು ಜೊತೆ ಮತ್ತೆ ಸಿನಿಮಾ ಮಾಡುವ ಆಸೆ ಇತ್ತು. ಆದರೆ ಅವರೇ ನಮ್ಮ ಜೊತೆ ಇಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಮತ್ತೆ ಅಪ್ಪು ನೆನೆದು ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿ ನೀವು ಕಲಿತುಕೊಳ್ಳಿ ಎಂದು ನೆಟ್ಟಿಗರು ಕ್ಲಾಸ್​ ತೆಗೆದುಕೊಂಡಿದ್ದಾರೆ.

Exit mobile version