ಅಭಿಮಾನಿಗಳಿಗಾಗಿ ಮತ್ತೆ ಬಣ್ಣ ಹಚ್ತಾರ ರಮ್ಯಾ..?

ರಮ್ಯಾ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗ್ತಾರಾ, ರಾಜಕೀಯದಲ್ಲಿ ಸಕ್ರೀಯರಾಗುತ್ತಾರಾ ಅಂತ ಎಲ್ಲರೂ ಕಾಯುತ್ತಿದ್ದಾರೆ. ಆದರೆ ಮತ್ತೆ ಬಣ್ಣ ಹಚ್ಚುವ ಬಗ್ಗೆ ರಮ್ಯಾ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿಲ್ಲ. ಸ್ಯಾಂಡಲ್ ವುಡ್ ಕ್ವೀನ್, ಮೋಹಕ ತಾರೆ ನಟಿ ರಮ್ಯಾ ಸದ್ಯ ಸಿನಿಮಾರಂಗದಿಂದ ಸದ್ಯ ದೂರ ಉಳಿದಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯಾ ಸಖತ್ ಆಕ್ಟೀವ್ ಆಗಿದ್ದಾರೆ. ಆಗಾಗ ಸಿನಿಮಾಗಳ ಬಗ್ಗೆ, ರಾಜಕೀಯ ಮತ್ತು ಪ್ರಸ್ತುತ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ.

ಆಂಗ್ಲ ವೆಬ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಮ್ಯಾ ಸಿನಿಮಾ ಮತ್ತು ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾಗೆ ಮತ್ತೆ ಬರ್ತೀರಾ ಎಂದು ಕೇಳಿದ ಪ್ರಶ್ನೆಗೆ ರಮ್ಯಾ “ನಾನು ಹೌದು ಎಂದು ಹೇಳಲು ಬಯಸುತ್ತೇನೆ. ಯಾಕೆಂದರೆ ಹೀಗೆ ಹೇಳಿದರೆ ತುಂಬಾ ಜನರನ್ನು ಸಂತೋಷ ಪಡುತ್ತಾರೆ. ಸಿನಿಮಾ ತಂಡದವರು ನನ್ನನ್ನು ಅಪ್ರೋಚ್​ ಮಾಡಿದ್ದರು. ಆದರೆ, ಅವರಿಗೆ ನಾನು ಏನನ್ನೂ ಹೇಳಿಲ್ಲ. ಅವರಿಗೆ ನೋಡೋಣ ಎಂದು ಹೇಳಬೇಕು. ಇಲ್ಲ ಎಂದರೆ ಬಹಳಷ್ಟು ಜನರು ನಿರಾಸೆಗೊಳ್ಳುತ್ತಾರೆ ಎಂದು ರಮ್ಯ ಹೇಳಿದ್ದಾರೆ.

****

Exit mobile version