ಅಪ್ಪು ಮನೆಗೆ ತೆಲುಗು ಸ್ಟಾರ್ ಪ್ರಭಾಸ್ ಭೇಟಿ

ನಟ ಪುನೀತ್ ರಾಜ್​ಕುಮಾರ್ ನಿಧನರಾಗಿ  2 ತಿಂಗಳು ಕಳೆದಿವೆ. ನಾಡಿನ ಜನ ಈ ಆಘಾತದಿಂದ ಇನ್ನೂ ಹೊರಬಂದಿಲ್ಲ. ವಿವಿಧ ಭಾಷೆಗಳ ಚಿತ್ರರಣಗದ ಗಣ್ಯರು ಪುನೀತ್ ಅವರ ನಿವಾಸಕ್ಕೆ ಆಗಮಿಸಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ.

ನಿನ್ನೆ ಅಂದರೆ ಡಿಸೆಂಬರ್ 28ರಂದು (ಮಂಗಳವಾರ) ಬಹುಭಾಷಾ ನಟ ಪ್ರಭಾಸ್ ಪುನೀತ್ ನಿವಾಸಕ್ಕೆ ಆಗಮಿಸಿದ್ದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ನಿವಾಸಕ್ಕೆ ಭೇಟಿ ನೀಡಿದ ಪ್ರಭಾಸ್, ಪುನೀತ್  ಪತ್ನಿ ಅಶ್ವಿನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ನಂತರ ರಾಘವೇಂದ್ರ ರಾಜ್​ಕುಮಾರ್ ಅವರೊಂದಿಗೆ ಚರ್ಚಿಸಿ ಪ್ರಭಾಸ್ ವಾಪಸ್ಸಾಗಿದ್ದಾರೆ.ಪ್ರಭಾಸ್​​​ ಅವರ ಜನ್ಮದಿನಕ್ಕೆ ಶುಭಹಾರೈಸಲು ಅಕ್ಟೋಬರ್ 23ರಂದು ಪುನೀತ್ ಕರೆ ಮಾಡಿದ್ದರಂತೆ. ಅದನ್ನು ಪ್ರಭಾಸ್ ಸ್ಮರಿಸಿದ್ದಾರೆ

****

Exit mobile version