ಅಕ್ಟೋಬರ್ ನಲ್ಲಿ ಸಿನಿ ಹಬ್ಬ, ಬ್ಯಾಕ್ ಟು ಬ್ಯಾಕ್ ಸಿನಿಮಾ ರಿಲೀಸ್..!

ಕೊರೊನಾ ಕರಾಳ ಛಾಯೆ ಕಡಿಮೆಯಾಗುತ್ತಿದಂತೆ ಎಲ್ಲಾ ಕ್ಷೇತ್ರದ ಆರ್ಥಿಕ ಚಟುವಟಿಕೆಗಳು ಗರಿಬಿಚಿದ್ದವು, ಆದರೆ ಚಿತ್ರರಂಗ ಕ್ಕೆ ಮಾತ್ರ ಆ ಭಾಗ್ಯ ಸಿಕ್ಕಿರಲಿಲ್ಲ ಈಗ ಸರ್ಕಾರ ಥಿಯೇಟರ್ ಹೌಸ್ ಫುಲ್ ಗೆ ಅವಕಾಶ ನೀಡಿದೆ, ಹೀಗೆ ಅವಕಾಶ ನೀಡಿದ್ದೆ ತಡ ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ ಚಿತ್ರಗಳು ತೆರೆಗೆ ಬರಲು ಪೈಪೋಟಿ ನಡೆಸಿವೆ.

ಇಷ್ಟ್ ದಿನ ಥಿಯೇಟರ್ ಫ್ರೀ ಗೆ ಕಾದಿದ್ದ ನಿರ್ಮಾಪಕರು ಸರ್ಕಾರದ ಗ್ರೀನ್ ಸಿಗ್ನಲ್ ಕೊಟ್ಟ ತಕ್ಷಣದಲ್ಲೆ ತಮ್ಮ ಚಿತ್ರಗಳ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.ಅಕ್ಟೋಬರ್ ನಲ್ಲಿ ಒಂದೆಡೆ ದಸರಾ ಹಬ್ಬದ ಸಂಭ್ರಮವಿದ್ದರೆ ಇನ್ನೊಂದೆಡೆ ಸಿನಿ ಪ್ರೀಯರಿಗೆ ಸಿನಿಮಾ ಹಬ್ಬ, ಬರುವ ಅಕ್ಟೋಬರ್ ತಿಂಗಳು ಸಾಲು ಸಾಲು ಚಿತ್ರಗಳು ತೆರೆ ಕಾಣುತ್ತಿವೆ.

ಯಾವ ಸಿನಿಮ, ಯಾವ ದಿನ ರಿಲೀಸ್:

ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರಗಳಾದ ಸಲಗ ಮತ್ತು ಕೋಟಿಗೊಬ್ಬ 3 ಅಕ್ಟೋಬರ್ 14 ರಂದು ಒಂದೇ ದಿನ ರಿಲೀಸ್ ಆಗ್ತಿವೆ. ಕೆ.ಪಿ.ಶ್ರೀಕಾಂತ್ ಮತ್ತು ಸೂರಪ್ಪ ಬಾಬು ಇಬ್ಬರೂ ಕೂಡ ತಮ್ಮ ಚಿತ್ರಗಳನ್ನು ಒಂದೇ ದಿನ ಅಖಾಡಕ್ಕೆ ಬಿಡುತ್ತಿದ್ದಾರೆ. ಸಿನಿಪ್ರಿಯರ ಉತ್ಸಾಹ ಗರಿಗೆದರಿದೆ. ಅವರ ನೆಚ್ಚಿನ ನಾಯಕರ ಸಿನಿಮಾಗಳನ್ನು ದೊಡ್ಡ ಪರದೆ ಮೇಲೆ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.  ಶಿವರಾಜಕುಮಾರ್ ಅಭಿನಯದ ಭಜರಂಗಿ2 ಮತ್ತು ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ ಪ್ರೇಮಂ ಪೂಜ್ಯಂ ಸಿನಿಮಾ ಅಕ್ಟೋಬರ್ 29ರಂದು ಬಿಡುಗಡೆ ಕಾಣುತ್ತಿವೆ. ಡಾರ್ಲಿಂಗ್ ಕೃಷ್ಣ ಅಭಿನಯದ ನಾಗಶೇಖರ್ ನಿರ್ದೇಶನದ ShriKrishna@gmail.com ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆಯಾಗುತ್ತಿದ್ದರೆ, ಸೂರಜ್ ಗೌಡ ಅವರ ಮೊದಲ ನಿರ್ದೇಶನದ ಚಿತ್ರ ‘ನಿನ್ನಾ ಸನಿಹಕೆ’ ಅಕ್ಟೋಬರ್ 8ರಂದು ಬಿಡುಗಡೆ ಕಾಣುತ್ತಿದೆ.

****

Exit mobile version