ಹಂಸಲೇಖರ ಓಂಕಾರದಿಂದ ಆಯುಧ ಪೂಜೆಯ ಶುಭಾಶಯ ತಿಳಿಸಿದ ಬ್ಯಾಡ್ ಮ್ಯಾನರ್ಸ್ ಚಿತ್ರ ತಂಡ..!
ದುನಿಯಾ ಸೂರಿ ನಿರ್ದೇಶನದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮಾನರ್ಸ್ ಚಿತ್ರ ಕನ್ನಡ ನಾಡಿನ ಜನತೆಗೆ ಆಯುಧ ಪೂಜೆಯ ಶುಭಾಶಯಗಳನ್ನು ತಿಳಿಸಿದೆ. ಇದರಲ್ಲೇನು ವಿಶೇಷ ಅಂತ ಕೇಳ್ತಿದ್ದೀರ ಹೌದು ವಿಶೇಷ ಇದೆ. ಚಿತ್ರ ತಂಡದ ಪೋಸ್ಟರ್ ನಲ್ಲಿ ಕನ್ನಡ ಚಿತ್ರರಂಗ ಕಂಡಂತಹ ಪ್ರತಿಭಾನ್ವಿತ ಗೀತ ರಚನಾಕಾರ ಹಾಗೂ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರ ಬ್ರಹ್ಮಾನಂದ ಓಂಕಾರ ಹಾಡನ್ನು ಬಳಸಿ ವಿಶೇಷವಾಗಿ ಈ ಶುಭಾಶಯ ತಿಳಿಸಿದೆ ಚಿತ್ರತಂಡ.
ರೈಫಲ್ ಮತ್ತು ಗನ್ ಗಳನ್ನು ಲಗೋರಿ ಕಲ್ಲಿನಂತೆ ಜೋಡಿಸಿ ರಚಿಸಿರುವ ಈ ಪೋಸ್ಟರ್ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಅಭಿಷೇಕ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿರುವುದು ಕೂಡ ಚಿತ್ರಕಥೆ ಬಗ್ಗೆ ಸ್ವಾರಸ್ಯ ಮೂಡುವಂತೆ ಮಾಡಿದೆ. ಅಕ್ಟೋಬರ್ 5 ರಿಂದ ಚಿತ್ರೀಕರಣ ಪುರಾರಂಭವಾಗಿದ್ದು ಡಿಸೆಂಬರ್ ವೇಳೆಗೆ ಚಿತ್ರೀಕರಣ ಮುಕ್ತಾಯವಾಗಲಿದೆ.
ಸೂರಿ ಬರೆದಿರುವ ಕಥೆಗೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ, ಬ್ಯಾಡ್ ಮ್ಯಾನರ್ಸ್ ನಲ್ಲಿ ಅಭಿಷೇಕ್ ಜೊತೆಗೆ ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ, ಮತ್ತು ಶೇಖರ್ ಎಸ್ ಅವರ ಛಾಯಾಗ್ರಹವಿದೆ.

****