‘ಸಲಗ’ ನಿಗೆ ಸಿಕ್ತು ಗುಡ್ ಓಪನಿಂಗ್ ಆದ್ರೆ ಕಣದಿಂದ ಹಿಂದೆ ಸರಿದ ‘ಕೋಟಿಗೊಬ್ಬ 3’ ನಾಳೆ ತೆರೆಗೆ..!
ಇಂದು ಕನ್ನಡ ಚಿತ್ರಪ್ರೇಮಿಗಳಿಗೆ ಸಂಭ್ರಮದ ದಿನವಾಗಿತ್ತು. ಆಯುಧ ಪೂಜೆಯ ದಿನದಂದು ಕನ್ನಡದ ಎರಡು ಬಿಗ್ ಬಜೆಟ್ ಚಿತ್ರಗಳಾದ ‘ಕೋಟಿಗೊಬ್ಬ 3’ ಹಾಗೂ ‘ಸಲಗ’ ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಿಸಿದ್ದವು. ಬಹು ತಾರಾಗಣದ ಈ ಚಿತ್ರಗಳು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದವು. ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ‘ಸಲಗ’ ಚಿತ್ರಗಳನ್ನು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಲು ಸಿದ್ಧತೆಯನ್ನೂ ನಡೆಸಿದ್ದರು. ಆದರೆ ಈ ಪೈಕಿ ‘ಸಲಗ’ ಮಾತ್ರ ಬಿಡುಗಡೆಯಾಗಿದ್ದು, ‘ಕೋಟಿಗೊಬ್ಬ 3’ ಅನಿವಾರ್ಯ ಕಾರಣದಿಂದ ನಾಳೆ ಬಿಡುಗಡೆಯಾಗಲಿದೆ.
ನಿರ್ಮಾಪಕ ಸೂರಪ್ಪ ಬಾಬು ಈ ಕುರಿತು ಮಾಹಿತಿ ನೀಡಿದ್ದು, ನಾಳೆ (ಶುಕ್ರವಾರ) ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಬಿಗ್ ಸ್ಕ್ರೀನ್ನಲ್ಲಿ ಕಿಚ್ಚನನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದವರಿಗೆ ನಿರಾಸೆಯಾಗಿದೆ. ಇತ್ತ ದುನಿಯಾ ವಿಜಯ್ ನಟನೆಯ ಸಲಗ ಫಸ್ಟ್ ಶೋ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ.
****