News

ರಿಲೀಸ್ ಆಯ್ತು ‘ಒಪ್ಪಂದ’ ಚಿತ್ರದ ಹಾಡುಗಳು..!

ರಿಲೀಸ್ ಆಯ್ತು ‘ಒಪ್ಪಂದ’ ಚಿತ್ರದ ಹಾಡುಗಳು..!
  • PublishedNovember 9, 2021

ಬಹುಭಾಷಾ ನಟ ಅರ್ಜುನ್ ಸರ್ಜಾ – ರಾಧಿಕಾ ಕುಮಾರಸ್ವಾಮಿ ಹಾಗೂ ಖ್ಯಾತ ನಟ ಜೆ ಡಿ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ “ಒಪ್ಪಂದ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಇದೇ ಸಂದರ್ಭ ದಲ್ಲಿ ಟ್ರೇಲರ್ ಸಹ ಅನಾವರಣವಾಯಿತು. ಆರು ಹಾಡುಗಳ ಪ್ರದರ್ಶನವಾಯಿತು.‌

ನಿರ್ಮಾಪಕರಾದ ರೆಹಮಾನ್(ಯಜಮಾನ), ಕೆ.ಮಂಜು, ಸೆವೆನ್ ರಾಜ್, ಫ್ಯಾಷನ್ ಡಿಸೈನರ್ ರಾಜೇಶ್ ಶೆಟ್ಟಿ, ಭವ್ಯಗೌಡ, ಮೋಹಿನಿ ಚೌಧರಿ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ಈ ಚಿತ್ರ ಉತ್ತಮವಾಗಿ ಮೂಡಿಬರಲು ಅರ್ಜುನ್ ಸರ್ಜಾ, ಜೆ ಡಿ ಚಕ್ರವರ್ತಿ ಹಾಗೂ ರಾಧಿಕಾ ಕುಮಾರಸ್ವಾಮಿ ಅವರ ಸಹಕಾರ ಬಹಳ ಮುಖ್ಯ. ಅವರೆಲ್ಲರೂ ಚಿತ್ರದಲ್ಲಿ ಅಮೋಘವಾಗಿ ನಟಿಸಿದ್ದಾರೆ. ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇದೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಮೀರ್‌‌.

****

Written By
Kannadapichhar

Leave a Reply

Your email address will not be published. Required fields are marked *