News

“ಮೃತ” ನಿರ್ದೇಶಕನ ಕುಟುಂಬಕ್ಕೆ ನಾಗೇಂದ್ರ ಪ್ರಸಾದ್ ಸಾಂತ್ವನ!

“ಮೃತ” ನಿರ್ದೇಶಕನ ಕುಟುಂಬಕ್ಕೆ ನಾಗೇಂದ್ರ ಪ್ರಸಾದ್ ಸಾಂತ್ವನ!
  • PublishedNovember 8, 2021

ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯನ್ನು ಸುದ್ದಿವಾಹಿನಿಯಲ್ಲಿ ನೋಡಿದ ಚಿತ್ರ ನಿರ್ದೇಶಕ  ವೈ ಎಸ್ ಸುರೇಶ್  ಅವರು ದುಖಃ ದಿಂದ  ಆಘಾತಗೊಂಡು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿಯ ಸದಸ್ಯರಾಗಿದ್ದ ಸುರೇಶ್ ಅವರು ‘ಹಳ್ಳಿ ಹುಡುಗರು  ಪ್ಯಾಟೆ ಲೈಫು’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ವೈ ಎಸ್ ಸುರೇಶ್ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಯಲಾದಹಳ್ಳಿ ಗ್ರಾಮದವರಾಗಿದ್ದು, ಇಂದು ಮೃತ ನಿರ್ದೇಶಕ ಸುರೇಶ್ ಮನೆಗೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಡಾ ವಿ. ನಾಗೇಂದ್ರಪ್ರಸಾದ್ ಭೇಟಿ ನೀಡಿದ್ದಾರೆ. ಇದೇ ವೇಳೆ ಕರ್ನಾಟಕ ಚಲನಚಿತ್ರ ನಿರ್ದೇಶಕರ ಕಲ್ಯಾಣ ಸಮಿತಿ ವತಿಯಿಂದ  ಪತ್ನಿ ಮಕ್ಕಳು ಮತ್ತು ಕುಟುಂಬದವರಿಗೆ ಹತ್ತು ಸಾವಿರ ರೂಪಾಯಿಗಳ ನಗದು ಹಣ ನೀಡಿ ಸಾಂತ್ವನ ಹೇಳಿದ್ದಾರೆ.

ನಾಗೇಂದ್ರಪ್ರಸಾದ್ ಅವರೊಂದಿಗೆ ಉಪಾಧ್ಯಕ್ಷರಾದ ನಾಗೇಂದ್ರ ಮಾಗಡಿ ಸಂಚಾಲಕರಾದ ಅಶೋಕ್ ದೇವ್ ಹಾಗೂ ವಿಶಾಲ್ ಧೀರಜ್ ಕೂಡ ಉಪಸ್ಥಿತರಿದ್ದರು.

****

Written By
Kannadapichhar

Leave a Reply

Your email address will not be published. Required fields are marked *