News

‘ಮಾರ್ಟಿನ್’ ಶೂಟ್ನಲ್ಲಿ ‘ಅಪ್ಪು’ಗೆ ನಮನ..

‘ಮಾರ್ಟಿನ್’ ಶೂಟ್ನಲ್ಲಿ ‘ಅಪ್ಪು’ಗೆ ನಮನ..
  • PublishedNovember 3, 2021

ಕಳೆದ ಶುಕ್ರವಾರ (ಅ 29) ದಂದು ಪುನೀತ್ ರಾಜಕುಮಾರ್ ಸಾವನಪ್ಪಿದ ಸುದ್ದಿ ಇಡೀ ಸ್ಯಾಂಡಲ್ ವುರ್ ಗೆ ಬರ ಸಿಡಿಲಿನಂತೆ ಬಂದೆರಗಿತು. ಯಾರೂ ಕನಸ್ಸಿನಲ್ಲೂ ಊಹಿಸದ ದೊಡ್ಡ ಶಾಕ್ ಅದಾಗಿತ್ತು. ಅವರ ಸಾವಿನಿಂದಾಗಿ ಸ್ಯಾಂಡಲ್ ವುಡ್ ನ ಚಿತ್ರೀಕರಣ,ಮುಖ್ಯ ಚಟುವಟಿಕೆಗಳು, ಸಿನಿಮಾ ಪ್ರದರ್ಶನಗಳೆಲ್ಲವೂ ಸ್ವಯಂ ಆಗಿ ಬಂದ್ ಆಗಿದ್ದವು. ಪುನೀತ್ ಅವರಿಗೆ ಅಂತಿಮ ವಿಧಿ ವಿಧಾನಗಳೆಲ್ಲ ಮುಗಿಸಿ ನಿನ್ನೆ (ನ 2) ಹಾಲು ತುಪ್ಪ ಕಾರ್ಯವನ್ನು ಪುನೀತ್ ಮತ್ತು ಇಡೀ ದೊಡ್ಮನೆ ಕುಟುಂಬ ನೆರೆವೇರಿಸಿದೆ.

ಈಗ ಪುನೀತ್ ಅವರ ಸ್ಮರಣೆ ಎಲ್ಲಡೆ ನಡೆಯುತ್ತಿದ್ದು ಪುನೀತ್ ಮತ್ತು ಶಿವಣ್ಣ ನ ಮನೆಗೆ ತೆಲುಗು ಮತ್ತು ತಮಿಳು ಸ್ಟಾರ್ ನಟರು ಬಂದು ಸಾಂತ್ವನ ಹೇಳಿ ಪುನೀತ್ ಸಮಾಧಿಗೆ ಭೇಟಿ ನೀಡಿ ಅವರನ್ನು ಸ್ಮರಿಸುತ್ತಿದ್ದಾರೆ. ಪುನೀತ್ ಸಾವಿನಿಂದಾಗಿ ಅರ್ಧಕ್ಕೆ ನಿಂತ್ತಿದ್ದಂತಹ ಚಿತ್ರೀಕರಣದ ಕೆಲಸಗಳು ಪುನರಾರಂಭವಾಗಿವೆ, ಅಲ್ಲೆಲ್ಲಾ ಪುನೀತ್ ರಾಜಕುಮಾರ್ ಪೋಟೊ ಇರಿಸಿ ಅವರಿಗೆ ನಮಿಸುವಂತಹ ಗೌರವ ಸಮರ್ಪಿಸುವ ಸನ್ನಿವೇಶಗಳು ಸಾಮಾನ್ಯವಾಗಿವೆ.

ಎ.ಪಿ ಅರ್ಜುನ್ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರತಂಡದಿಂದ ಪುನೀತ್ ರಾಜಕುಮಾರ್ ಗೆ ನಮನ ಸಲ್ಲಿಸಿದ್ದಾರೆ. ಪುನೀತ್ ರಾಜಕುಮಾರ್ ಇಡೀ ಸ್ಯಾಂಡಲ್ ವುಡ್ ಗೆ ದೊಡ್ಡ ಸ್ಟ್ರೆಂಥ್ ಈಗ ಅವರನ್ನು ಕಳೆದುಕೊಂಡಿರುವ ಇಡೀ ಚಿತ್ರರಂಗಕ್ಕೆ ದೊಟ್ಟ ಶೂನ್ಯ ಆವರಿಸಿದೆ.

****

Written By
Kannadapichhar

Leave a Reply

Your email address will not be published. Required fields are marked *