News

ಮತ್ತೆ ಶುರುವಾಯ್ತು ಎದೆ ತುಂಬಿ ಹಾಡುವೆನು….

  • PublishedAugust 10, 2021

ಅಪಾರ ಪ್ರೀತಿಯುಳ್ಳ ಹೃದಯದಿಂದ ನಡೆಯುತ್ತಿದ್ದ ಕಾರ್ಯಕ್ರಮ ಎದೆ ತುಂಬಿ ಹಾಡುವೆನು… ಈ ಕಾರ್ಯಕ್ರಮಕ್ಕೆ ಜೀವ ಕೊಟ್ಟಿದ್ದವರು ಮಧುರವಾದ ಕನ್ನಡವನ್ನೇ ಜೀವಾಳ ಆಗಿಸಿಕೊಂಡಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರು… ಸತತವಾಗಿ 9 ವರ್ಷಗಳ ವಿರಾಮ ಪಡೆದಿದ್ದ ಕಾರ್ಯಕ್ರಮ ಇದೀಗ ಹೊಸ ರೂಪದೊಂದಿಗೆ, ಎಸ್.ಪಿ.ಬಿ. ಅವರ ಆಶಿರ್ವಾದದೊಂದಿಗೆ ಮತ್ತೊಮ್ಮೆ ಕನ್ನಡಿಗರ ಮನೆಮನೆಗೆ ಬರ್ತಾ ಇದೆ…

ಎಸ್.ಪಿ.ಬಿ. ಅವರಿಲ್ಲದೆ ಬಣಗುಡುವ ಎದೆ ತುಂಬಿ ಹಾಡುವೆನು ವೇದಿಕೆಯನ್ನ ಅಲ್ಪಮಟ್ಟಿಗಾದರೂ ಎಸ್.ಪಿ.ಬಿ.ಮಯವಾಗಿಸಲು ಅವರ ಪುತ್ರ ಎಸ್.ಪಿ. ಚರಣ್ ಅವರು ಈ ಕಾರ್ಯಕ್ರಮದ ಭಾಗವಾಗಿ ಇರಲಿದ್ದಾರೆ.

ನಾಡಿನ ಜನಮನ ಗೆದಿದ್ದ ಶೋ.. ಎದೆ ತುಂಬಿ ಹಾಡುವೆನು ಮತ್ತೆ ಶುರುವಾಗಿದೆ
ನಾಡಿನ ಜನಮನ ಗೆದಿದ್ದ ಶೋ.. ಎದೆ ತುಂಬಿ ಹಾಡುವೆನು ಮತ್ತೆ ಶುರುವಾಗಿದೆ

ಸುಮಧುರ ಕಂಠದ ಜನಪ್ರೀಯ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ.., ಹಾಗೆಯೇ ಖ್ಯಾತ ಗಾಯಕ ರಘು ದೀಕ್ಷಿತ್ ರಂತಹ ಸಂಗೀತ ಕ್ಷೇತ್ರದ ದಿಗ್ಗಜರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಪ್ರಮುಖ ತೀರ್ಪುಗಾರರಾಗಿ ವೇದಿಕೆಗೆ ಮೆರುಗು ನೀಡಲಿದ್ದಾರೆ.

ಇಲ್ಲಿರುವ ಮತ್ತೊಂದು ವಿಶೇಷತೆ ಏನಂದ್ರೆ ಎಸ್.ಪಿ.ಬಿ. ಅವರ ಮುಂದೆ ಹಾಡಿ ಶಭಾಸ್ ಗಿರಿ ಪಡೆದಿದ್ದ 60 ಹಳೆಯ ಗಾಯಕರು ಈ ಕಾರ್ಯಕ್ರಮದಲ್ಲಿ ಜ್ಯೂರಿಗಳಾಗಿರುತ್ತಾರೆ. ಆ ಮೂಲಕ ಗುರು ಎಸ್.ಪಿ.ಬಿ. ಅವರಿಗೆ  ಪ್ರೀತಿಯಿಂದ ಗೌರವ ಸಲ್ಲಿಸುತ್ತಾ ಕಾರ್ಯಕ್ರಮಕ್ಕೆ ರಂಗು ನೀಡಲಿದ್ದಾರೆ…

****

Written By
Kannadapichhar

Leave a Reply

Your email address will not be published. Required fields are marked *