News

‘ದ್ವಿತ್ವ’: ಪುನೀತ್ ರಾಜ್‌ಕುಮಾರ್‌ಗೆ ಮತ್ತೊಮ್ಮೆ ಜೋತೆಯಾದ ಬಹುಭಾಷಾ ನಟಿ ತ್ರಿಷಾ

‘ದ್ವಿತ್ವ’: ಪುನೀತ್ ರಾಜ್‌ಕುಮಾರ್‌ಗೆ ಮತ್ತೊಮ್ಮೆ ಜೋತೆಯಾದ ಬಹುಭಾಷಾ ನಟಿ ತ್ರಿಷಾ
  • PublishedAugust 3, 2021

‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ನಟನೆಯ ಬಹುನಿರೀಕ್ಷಿತ ‘ದ್ವಿತ್ವ‘ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ. ಬಹುಭಾಷಾ ನಟಿ ತ್ರಿಷಾ ಕೃಷ್ಣನ್‌ ‘ದ್ವಿತ್ವ’ಗೆ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಈಗಾಗಲೇ ಸಮಂತಾ ಅಕ್ಕಿನೇನಿ, ಶ್ರದ್ಧಾ ಶ್ರೀನಾಥ್, ಅಮಲಾ ಪೌಲ್‌ ಥರದ ಬಹುಭಾಷಾ ನಟಿಯರಿಗೆ ನಿರ್ದೇಶನ ಮಾಡಿರುವ ಪವನ್ ಕುಮಾರ್ ಈಗ ‘ದ್ವಿತ್ವ’ ಮೂಲಕ ತ್ರಿಷಾಗೆ ನಿರ್ದೇಶನ ಮಾಡಲಿದ್ದಾರೆ.

Dvitva: ಪುನೀತ್ ರಾಜ್‌ಕುಮಾರ್‌ಗೆ ಮತ್ತೊಮ್ಮೆ ಜೋತೆಯಾದ ಬಹುಭಾಷಾ ನಟಿ ತ್ರಿಷಾ!
Dvitva: ಪುನೀತ್ ರಾಜ್‌ಕುಮಾರ್‌ಗೆ ಮತ್ತೊಮ್ಮೆ ಜೋತೆಯಾದ ಬಹುಭಾಷಾ ನಟಿ ತ್ರಿಷಾ!

‘ದ್ವಿತ್ವ’ ಚಿತ್ರದಲ್ಲಿ ನಟಿಸುವಂತೆ ನಟಿ ತ್ರಿಷಾಗೆ ಆಫರ್ ನೀಡಲಾಗಿದೆ ಎಂಬ ಮಾಹಿತಿಯನ್ನು ಕೆಲ ದಿನಗಳ ಹಿಂದಷ್ಟೇ ಹಿಂಟ್ ಕೊಡಲಾಗಿತ್ತು, ಇದೀಗ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ. 2014ರಲ್ಲಿ ತೆರೆಕಂಡ ಪುನೀತ್ ರಾಜ್‌ಕುಮಾರ್ ನಟನೆಯ ‘ಪವರ್ ***’ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು ತ್ರಿಷಾ. ಆ ಸಿನಿಮಾದಿಂದ ಭರ್ಜರಿ ಯಶಸ್ಸು ಪಡೆದುಕೊಂಡಿದ್ದ ತ್ರಿಷಾ, ಪುನಃ ತಮಿಳು-ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾದರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು. ಇದೀಗ ಏಳು ವರ್ಷಗಳ ಬಳಿಕ ಪುನಃ ಪುನೀತ್‌ಗೆ ನಾಯಕಿಯಾಗುವ ಚಾನ್ಸ್‌ ಪಡೆದುಕೊಂಡಿದ್ದಾರೆ ತ್ರಿಷಾ!

‘ದ್ವಿತ್ವ’ಗೆ ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. ‘ಕೆಜಿಎಫ್’, ‘ಯುವರತ್ನ’, ‘ರಾಜಕುಮಾರ’, ‘ಸಲಾರ್’ ಸಿನಿಮಾಗಳ ನಿರ್ಮಾಪಕ ವಿಜಯ್ ಕಿರಗಂದೂರು ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ‘ದ್ವಿತ್ವ’ಗೆ ಹಣ ಹಾಕುತ್ತಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *