ಅಪ್ಪನ ‘ಪುಣ್ಯ ಸ್ಮರಣೆಯ’ ದಿನವೇ ಪರೀಕ್ಷೆ ಬರೆಯುತ್ತಿರುವ ಮಗಳು
ಇಂದು (ನ.8) ಪುನೀತ್ ರಾಜಕುಮಾರ್ ಅವರ 11 ನೇ ದಿನದ ಪುಣ್ಯತಿಥಿ ನಡೆಯುತ್ತಿದೆ, ಇತ್ತ ಪುನೀತ್ ಕುಟುಂಬಸ್ಥರು 11 ನೇ ದಿನದ ಕಾರ್ಯ ನೆರವೇರುಸುತ್ತಿದ್ದಾರೆ. ಅಪ್ಪು ಅವರ ಎರಡನೇ ಮಗಳು ವಂದಿತಾ ಪುನೀತ್ ರಾಜಕುಮಾರ್ ಅವರ ಪುಣ್ಯತಿಥಿ ದಿನದಂದೆ ಅಪ್ಪ ಇಲ್ಲ ಎಂಬ ನೋವಿನಲ್ಲೆ ಪರೀಕ್ಷೆ ಬರೆಯುವಂತಾಗಿದೆ.
ಬೆಂಗಳೂರಿನ ಪ್ಯಾಲೇಸ್ ರಸ್ತೆಯ ಸೋಫಿಯಾ ಶಾಲೆಯಲ್ಲಿ ICSE 10th ತರಗತಿಯಲ್ಲಿ ಓದುತ್ತಿರೊ ವಂದಿತಾಳಿಗೆ ಮುಂದಿನ ವಾರದಲ್ಲಿ ICSE 10th ಸೆಮಿಸ್ಟರ್ ಎಕ್ಸಾಂ ಹಿನ್ನಲೆ ಇಂದಿನಿಂದ ICSE 10th ಪೂರ್ತ ತಯಾರಿ ಎಕ್ಸಾಂ ಆರಂಭವಾಗಿದೆ. ಹೀಗಾಗಿ ತಂದೆಯ 11ನೇ ದಿನದ ಕಾರ್ಯದ ನಡುವೆಯೂ ಪರೀಕ್ಷೆಯನ್ನು ತಪ್ಪಿಸದೆ ವಂದಿತಾ ಪರೀಕ್ಷೆಗೆ ಹಾಜರಾಗಲಿದ್ದಾಳೆ. ಅಪ್ಪನ ಅಗಲಿಕೆಯ ನೋವಿನಲ್ಲಿ ಪರೀಕ್ಷೆ ಬರೆಯಲು ವಂದಿತಾ ಮುಂದಾಗಿದ್ದಾಳೆ.
ಪುನೀತ್ ರಾಜಕುಮಾರ್ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ರು. ಕಲಿಕೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕಾಳಜಿ ವಹಿಸಿದ್ರು. ತಂದೆಯ ಆಸೆಯಂತೆ ನೋವಿನ ನಡುವೆಯೂ ಎಕ್ಸಾಂ ಬರೆಯಲು ವಂದಿತಾ ಮನಸ್ಸು ಮಾಡಿದ್ದಾಳೆ. ಇಂದಿನಿಂದ ICSE 10th ಪೂರ್ತ ತಯಾರಿ ಎಕ್ಸಾಂ ಆರಂಭವಾಗಿದೆ. ಆಫ್ ಲೈನ್ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದೆ. ಪುನೀತ್ ರಾಜ್ಕುಮಾರ್ ಮಗಳು ವಂದಿತಾಗೆ ಎಕ್ಸಾಂ ಇರುವ ಹಿನ್ನಲೆಯಲ್ಲಿ ಬೆಳ್ಳಗ್ಗೆಯೇ ಬೇಗನೆ ಪೂಜಾ ಕಾರ್ಯ ಮುಗಿಸಲು ಪುನೀತ್ ರಾಜ್ಕುಮಾರ್ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು, ಅದರಂತೆಯೇ ಪೂಜೆ ಮುಗಿಸಿರುವ ವಂದಿತಾ ಪರೀಕ್ಷೆ ಬರೆಯಲು ತೆರಳಿದ್ದಾರೆ.
****