News

ನಿಖಿಲ್ ಪತ್ನಿ ರೇವತಿ ಅದ್ದೂರಿ ಸೀಮಂತ ಸಮಾರಂಭ..!

ನಿಖಿಲ್ ಪತ್ನಿ ರೇವತಿ ಅದ್ದೂರಿ ಸೀಮಂತ ಸಮಾರಂಭ..!
  • PublishedSeptember 13, 2021

ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಷಯ ಇತ್ತೀಚೆಗಷ್ಟೆ ಬಹಿರಂಗವಾಗಿತ್ತು. ಈ ವಿಷಯ ತಿಳಿದಾಗ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು. ಈಗ ತುಂಬು ಗರ್ಭಿಣಿ ರೇವತಿ ಅವರ ಸೀಮಂತ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲಾಗಿದೆ.

ರೇವತಿಗೆ ಈಗ 8 ತಿಂಗಳ ತುಂಬು ಗರ್ಭಿಣಿ. ಪುಟ್ಟ ಅತಿಥಿಯ ಆಗಮನಕ್ಕಾಗಿ ಕಾಯುತ್ತಿರುವ ದೊಡ್ಡ ಗೌಡ ಕುಟುಂಬ ಇಂದು ರೇವತಿ ಅವರ ಸೀಮಂತ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ.

ಬೆಂಗಳೂರಿನ ಎಚ್​ಎಸ್​ಆರ್​ ಬಡಾವಣೆಯಲ್ಲಿರುವ  ಮಾನ್ವಿ ಕನ್ವೆನ್ಷನ್  ಹಾಲ್‍ನಲ್ಲಿ ಸೀಮಂತ ಸಮಾರಂಭ ನಡೆದಿದೆ. ಈ ಕಾರ್ಯಕ್ರಮದಲ್ಲಿ ರೇವತಿ ಹಾಗೂ ನಿಖಿಲ್ ಕುಮಾರ್ ಅವರ ಕುಟುಂಬದವರು ಹಾಗೂ ಆಪ್ತರು ಭಾಗಿಯಾಗಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *