News

ನೈಟ್ ಕರ್ಫ್ಯೂ ಎಫೆಕ್ಟ್, ಲಾಸ್ಟ್ ಶೋ ಗೆ ಬಿತ್ತು ಕತ್ತರಿ..!

ನೈಟ್ ಕರ್ಫ್ಯೂ ಎಫೆಕ್ಟ್, ಲಾಸ್ಟ್ ಶೋ ಗೆ ಬಿತ್ತು ಕತ್ತರಿ..!
  • PublishedDecember 28, 2021

2021 ರ ವರ್ಷದ ಮಧ್ಯದಲ್ಲಿ ದೇಶವನ್ನೆ ಕಂಗೆಡಿಸಿ ಹೈರಾಣು ಮಾಡಿದ್ದ ಕೊರೊನಾ. ಬಡವ, ಶ್ರೀಮಂತ ಎಂದು ನೋಡದೇ ಎಲ್ಲರ ಮೇಲೂ ದಾಳಿ ಮಾಡಿತ್ತು. ಈ ವರ್ಷದ ಮಧ್ಯದಂತರ ಆದ ಮೇಲೆ ಎಲ್ಲವೂ ಮತ್ತೆ ಚೇತರಿಸಿಕೊಳ್ಳುತ್ತಿತ್ತು. ಕರೋನಾ ಅಬ್ಬರವೂ ಕೂಡ ಕಡಿಮೆಯಾಗಿತ್ತು. ಕಳೆದ ಎರಡು ವರ್ಷಗಳಿಂದ ಇಡೀ ವಿಶ್ವವನ್ನೇ ತನ್ನ ಕಪಿ ಮುಷ್ಠಿಯಲ್ಲಿಟ್ಟುಕೊಂಡು ಜನರ ಜೀವನವನ್ನು ಹಿಂಡಿ ಹಿಪ್ಪೆ ಮಾಡಿತ್ತು. ಈ ವರ್ಷ ಮೇ ಬಳಿಕ ಜನರಿಗೆ ಮತ್ತೆ ಹೊಸ ಭಾವನೆ ಮೂಡಿತ್ತು. ಇನ್ನೂ ಕೊರೋನಾ ನಮ್ಮನ್ನು ಕಾಡಲ್ಲ ಅಂದುಕೊಂಡಿದ್ದರು. ಚಿತ್ರರಂಗ ಕೂಡ ಕೊರೋನಾ ಹೊಡೆತಕ್ಕೆ ಸಿಲುಕಿ ನಲುಗಿಹೋಗಿತ್ತು. ಈಗ ತಾನೇ ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಲಾಕ್​ ಡೌನ್​ ಸಡಿಲದ ಬಳಿಕ ಶೇಕಡಾ 50 ರಷ್ಟು ಸೀಟು ಭರ್ತಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಮತ್ತೆ ಕೊರೋನಾ ಹೆಚ್ಚಾದಗ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತ್ತು. ಮತ್ತೆ ಕಳೆದ ಎರಡು ತಿಂಗಳಿನಿಂದ ಹಂತ ಹಂತವಾಗಿ ಟ್ರ್ಯಾಕ್ ​ಗೆ ಮರಳಿತ್ತು. 

ಹೊಸ ವರ್ಷಾಚರಣೆ ವೇಳೆ ಹೆಚ್ಚಾಗುವ ಸಾಧ್ಯತೆ ಇರುವ ಮಹಾಮಾರಿ ಕೊರೊನಾ ಹಾಗೂ ಒಮಿಕ್ರಾನ್ ಕಟ್ಟಿ ಹಾಕಲು ರಾಜ್ಯ ಸರ್ಕಾರ ನೈಟ್‌ ಕರ್ಫ್ಯೂಜಾರಿಗೆ ತಂದಿದೆ. ಇಂದಿನಿಂದ 2022ರ ಜನವರಿ 7ರವರೆಗೆ ನೈಟ್‌ ಕರ್ಫ್ಯೂ ಜಾರಿಯಲ್ಲಿರಲಿದೆ.

ಚಿತ್ರಮಂದಿರಗಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇಂದಿನಿಂದ ನೈಟ್​ ಕರ್ಫ್ಯೂ ಜಾರಿಯಲ್ಲಿರಲಿದೆ. ಹೀಗಾಗಿ ಚಿತ್ರಮಂದಿರಗಳಲ್ಲಿ ಇಂದಿನಿಂದ 4 ಶೋ ಮಾತ್ರ ಪ್ರದರ್ಶನಗೊಳ್ಳಲಿದೆ. ನಿನ್ನೆಯವರೆಗೆ 5 ಶೋ ಪ್ರದರ್ಶನ ನಡೆಯುತ್ತಿತ್ತು. ಆದರೆ ಇಂದಿನಿಂದ 4 ಶೋ ಮಾತ್ರ ಪ್ರದರ್ಶನಗೊಳ್ಳಲಿದೆ. ರಾಜ್ಯದ ಶೇ.80ರಷ್ಟು ಚಿತ್ರಮಂದಿರಗಳಲ್ಲಿ 7 ಗಂಟೆ ಶೋ ಲಾಸ್ಟ್ ಆಗಲಿದೆ. ನೈಟ್ ಶೋ ಸ್ಥಗಿತದಿಂದ ಶೇ.30ರಷ್ಟು ಆದಾಯಕ್ಕೆ ಕತ್ತರಿ ಬಿದ್ದಿದೆ. ನೈಟ್ ಕರ್ಫ್ಯೂ ವಿಸ್ತರಣೆಯಾದ್ರೆ ಸಮಯ ಬದಲಾವಣೆಗೆ ಚಿಂತನೆ ನಡೆಸಲಾಗುತ್ತಿದೆ .ಸರ್ಕಾರ ಘೋಷಿಸಿದ 10 ದಿನಗಳ ನೈಟ್ ಕರ್ಫ್ಯೂಗೆ ಒಂದು ಶೋ ಬಂದ್ ಮಾಡಲಾಗಿದೆ.

ರಾಜ್ಯಾದ್ಯಂತ ಒಟ್ಟು 630 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿವೆ. ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಒಟ್ಟು 150 ಸಿಂಗಲ್ ಸ್ಕ್ರೀನ್ ಇವೆ. ಬೆಂಗಳೂರಿನಲ್ಲಿ ಮಲ್ಟಿಪ್ಲೆಕ್ಸ್ 45. ರಾಜ್ಯಾದ್ಯಂತ ಒಟ್ಟು 60 ಮಲ್ಟಿಪ್ಲೆಕ್ಸ್ ಗಳಿವೆ. ರಾಜ್ಯದ ಶೇ.80 ಥಿಯೇಟರ್ ಗಳಲ್ಲಿ ಇಂದಿನಿಂದ ಸಂಜೆ 7 ಗಂಟೆ ಶೋ ಲಾಸ್ಟ್ ಮಾಡಲಾಗುತ್ತಿದೆ. ನೈಟ್​ ಶೋ ಒಂದು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಶೇ.30ರಷ್ಟು ಕಲೆಕ್ಷನ್​​ಗೆ ಕತ್ತರಿ ಬೀಳಲಿದೆ. ಕಾರಣ ಹೆಚ್ಚು ಮಂದಿ ನೈಟ್​ ಶೋ ನೋಡಲು ಇಷ್ಟಪಡುತ್ತಾರೆ. ಬೆಳಗಿನ ಶೋಗಳೆಲ್ಲ ಖಾಲಿ ಇದ್ದರೂ, ನೈಟ್​ ಶೋ ಬಹುತೇಕ ಕಡೆ ಹೌಸ್​ಫುಲ್​ ಆಗುತ್ತೆ. ವೀಕೆಂಡ್​ನಲ್ಲಿ ಹೆಚ್ಚು ಮಂದಿ ನೈಟ್ ಶೋ ಸಿನಿಮಾ ನೋಡಲು ಇಷ್ಟಪಡುತ್ತಾರೆ.

****

Written By
Kannadapichhar

Leave a Reply

Your email address will not be published. Required fields are marked *