ಪ್ರಧಾನಿ ಜೊತೆ ರಿಷಬ್-ರಾಕಿ ಭಾಯ್ ಏನ್ ವಿಷ್ಯಾ ಗೊತ್ತಾ ?


ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದು ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ 5 ದಿನಗಳ ಕಾಲ ನಡೆಯುವ ಏರೋ ಇಂಡಿಯಾ ಏರ್ ಶೋವನ್ನು ಉದ್ಘಾಟನೆ ಮಾಡಿದ್ದಾರೆ…ರಾಜ್ಯ ಪ್ರವಾಸಕ್ಕೆ ಒಂದು ದಿನ ಮುಂಚಿತವಾಗಿಯೇ ಮೋದಿಯವರು ಬೇಟಿ ನೀಡಿದ್ದು ಭಾನುವಾರ ರಾತ್ರಿ ಮೋದಿಯವರು ರಾಜಭವನದಲ್ಲಿ ತಂಗಿದ್ದರು….

ಇದೇ ಸಮಯದಲ್ಲಿ ಪ್ರಧಾನಿಯವರನ್ನ ಕನ್ನಡ ಸಿನಿಮಾರಂಗದ ಕೆಲ ಗಣ್ಯರನ್ನ ಭೇಟಿ ಮಾಡಿದ್ದಾರೆ ..ನಟ ಯಶ್ , ಪುನೀತ್ ಅವ್ರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ , ರಿಷಬ್ ಶೆಟ್ಟಿ, ನಿರೂಪಕಿ ಶ್ರದ್ಧಾ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರೊಟ್ಟಿಗೆ ಪ್ರಧಾನಿ ಮೋದಿ ಕೆಲ ಸಮಯ ಕಳೆದಿದ್ದಾರೆ…