ನಾ ಕಂಡ ಯಶ್ : ಹುಟ್ಟುಹಬ್ಬಕ್ಕೆ ಯಶ್ ತಾಯಿ ವಿಶ್
ಇಂದು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನ. ಈ ಸಂಧರ್ಭದಲ್ಲಿ ಇಂದು ಅವರು ಬೆಳಗ್ಗೆ 10.10 ಕ್ಕೆ ಟಾಕ್ಸಿಕ್ ಸಿನಿಮಾದಲ್ಲಿ ತಮ್ಮ ಪಾತ್ರ ಯಾವುದು ಎನ್ನುವುದರ ಇಂಟ್ರಡಕ್ಷನ್ ವಿಡಿಯೋ ಉಡುಗೊರೆಯಾಗಿ ಅಭಿಮಾನಿಗಳಿಗೆ ನೀಡಿದ್ದಾರೆ. ಇದೀಗ ಯಶ್ ಅವರ ತಾಯಿ ನಿರ್ಮಾಪಕಿ ಪುಷ್ಪ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಮಗನ ಹುಟ್ಟಿದ ಹಬ್ಬಕ್ಕೆ ವಿಶ್ ಮಾಡಿದ್ದಾರೆ.
‘ನಾ ಕಂಡ ಯಶ್’ ಎಂದು ಬರೆದು ಮಗನ ಜೊತೆಗಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇನ್ನೊಂದು ಪೋಸ್ಟ್ ನಲ್ಲಿ “ತಾಯಿಯ ಪ್ರೀತಿ ಮಗನ ಮೊದಲ ಮನೆ,ಮಗನ ಪ್ರೀತಿ ತಾಯಿಯ ಶಾಶ್ವತ ಶಕ್ತಿ “ ಎಂದು ಬರೆದುಕೊಂಡಿದ್ದಾರೆ.