ಅಭಿಮಾನಿಗಳ ನಡುವೆ ಇರ್ತಾರೋ ಇಲ್ಲವೋ ಅನ್ನೋ ಕುತೂಹಲಕ್ಕೆ ತೆರೆ ಎಳೆದ ಯಶ್
ನಾಳೆ ಭಾರತ ಚಿತ್ರ ರಂಗದಲ್ಲಿ ಅಲೆಯನ್ನೇ ಎಬ್ಬಿಸಿದ ಯಶ್ ಅವರ ಹುಟ್ಟಿದ ದಿನ. ಪ್ರತಿ ಬಾರಿಯಂತೆ ರಾಕಿ ಭಾಯ್ ಅಭಿಮಾನಿಗಳು ಈ ದಿನಕ್ಕಾಗಿ ಕಾಯ್ತಿರ್ತಾರೆ. ಆದ್ರೆ ಈ ವರ್ಷ ಯಶ್ ಅವರು ಅಭಿಮಾನಿಗಳ ನಡುವೆ ಇರ್ತಾರೋ ಇಲ್ಲವೋ ಅನ್ನುವ ಕುತೂಹಲ ಇತ್ತು. ಇದಕ್ಕೆ ಇದೀಗ ಯಶ್ ಅವರು ಬ್ರೇಕ್ ಹಾಕಿದ್ದಾರೆ.
ಇಂದು ಯಶ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ “ನನ್ನ ಪ್ರೀತಿಯ ಅಭಿಮಾನಿಗಳಿಗೆ,ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ನೋಡೋಕೆ ಎಷ್ಟು ಕಾಯ್ತಿದ್ದೀರಾ ಅನ್ನೋದು ನನಗೆ ಚೆನ್ನಾಗಿ ಗೊತ್ತು. ನನಗೂ ಅಷ್ಟೇ, ನಿಮ್ಮೆಲ್ಲರನ್ನು ಭೇಟಿ ಮಾಡೋಕೆ ಅತೀವ ಆತುರವಿದೆ.ಈ ವರ್ಷ ನನ್ನ ಹುಟ್ಟುಹಬ್ಬದಂದೇ ನಿಮ್ಮನ್ನು ನೋಡಬೇಕು ಅಂತ ತುಂಬಾ ಆಸೆ ಇತ್ತು. ಆದರೆ ಬರುವ ಮಾರ್ಚ್ 19, 2026 ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರಬೇಕಿದೆ. ಅದರ ಕೆಲಸಗಳಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಂಡಿರೋದ್ರಿಂದ, ಸದ್ಯಕ್ಕೆ ನಿಮ್ಮನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ.ಇವತ್ತು ನಮಗೆ ಸಿಗೋಕೆ ಆಗದಿದ್ರೂ, ಖಂಡಿತ ನಾನು ಇದನ್ನು ಸರಿದೂಗಿಸಿಕೊಡ್ತೀನಿ. ನಾವು ಅತೀ ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೂ, ನೀವು ಕಳಿಸೋ ಪ್ರತಿಯೊಂದು ಶುಭಾಶಯ ಮತ್ತು ಪ್ರೀತಿಯನ್ನು ನಾನು ಸದಾ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತೇನೆ.ನಿಮ್ಮ ಪ್ರೀತಿಯ,ಯಶ್” ಎಂದು ಬರೆದುಕೊಂಡಿದ್ದಾರೆ.
ಇದರ ಮೂಲಕ ಅಭಿಮಾನಿಗಳಿಗೆ ತಮ್ಮ ಹುಟ್ಟುಹಬ್ಬದಂದು ಅವರೊಡನೆ ಇರಲು ಸಾಧ್ಯವಿಲ್ಲ ಎಂದು ಕನ್ಫರ್ಮ್ ಮಾಡಿದ್ದಾರೆ.