ಟಾಕ್ಸಿಕ್ ಬರವಣಿಗೆಯಲ್ಲಿ ಗೀತು ಜತೆ ಯಶ್ ‘ಕೈ’
ಯಶ್ ನಟನೆಯ ಚಿತ್ರವಾದ ಟಾಕ್ಸಿಕ್ ಚಿತ್ರೀಕರಣ ಬರದಿಂದ ಸಾಗುತ್ತಿದೆ. ಚಿತ್ರವು ಮಾರ್ಚ್ 19 ರಂದು ವಿಶ್ವಾದಾದ್ಯಂತ ಬಿಡುಗಡೆ ಗೊಳ್ಳಲಿದೆ.
ಇಂದು ಚಿತ್ರ ತಂಡವು ಚಿತ್ರದ 100 ದಿನ ಕೌಂಟ್ ಡೌನ್ ಪೋಸ್ಟರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಬೆಳಗ್ಗೆ 11 ಗಂಟೆಗೆ ಬಿಡುಗಡೆ ಮಾಡಿದ್ದಾರೆ.ಇದೀಗ ಚಿತ್ರದ ಪೋಸ್ಟರ್ ನಿಂದ ಒಂದು ಮಹತ್ವದ ಬೆಳವಣಿಗೆ ಬೆಳಕಿಗೆ ಬಂದಿದೆ.
ಚಿತ್ರದ ಪೋಸ್ಟರ್ ನಲ್ಲಿ ಟಾಕ್ಸಿಕ್ ಸಿನಿಮಾದ ಕಥೆಯ ಬರವಣಿಗೆಯಲ್ಲಿ ಗೀತು ಮೋಹನ್ ದಾಸ್ ಅವರ ಜೊತೆಗೆ ಯಶ್ ಅವರು ಸೇರಿ ಬರೆದಿದ್ದಾರೆ ಎನ್ನುವುದು ಖಚಿತವಾಗಿದೆ.ಇದು ಯಶ್ ಅವರ ಅಭಿಮಾನಿಗಳಿಗೆ ಹಾಗೂ ಕನ್ನಡ ಚಿತ್ರರಂಗಕ್ಕೆ ಮಹತ್ತರ ಬೆಳವಣಿಗೆಯಾಗಿ ಹೊರ ಹೊಮ್ಮಿದೆ.
ಈಗಾಗಲೇ ಯಶ್ ಅವರು ತಮ್ಮ ಸಿನಿಮಾ ಕಥೆ ಮೇಲೆ ಬಹಳ ನಿಗ ವಹಿಸುತ್ತಾರೆ. ಇದೀಗ ಅವರು ಬರವಣಿಗೆಯು ಹೇಗಿರಬಹುದು ಎಂಬುದರ ಬಗ್ಗೆ ಕುತೂಹಲ ಮೂಡಿದೆ.