ವೈರಲ್ ಆಗ್ತಿದೆ ಕಾಲೇಜು ಪ್ರೋಗ್ರಾಂನ ಯಶ್ ಡ್ಯಾನ್ಸ್..

ಸ್ಯಾಂಡಲ್ ವುಡ್ ನ ಬಹು ಬೇಡಿಕೆ ನಟ. ಕೆ ಜಿ ಎಫ್ ಚಿತ್ರದ ಮೂಲಕ ಭಾರತ ಚಿತ್ರರಂಗವೇ ಕನ್ನಡ ಸಿನಿಮಾರಂಗದ ಕಡಗೆ ತಿರುಗಿ ನೋಡುವಂತೆ ಮಾಡಿದ್ದ ನಟ ರಾಕಿಂಗ್ ಸ್ಟಾರ್ ಯಶ್. ಅವರ ಕೆ ಜಿ ಎಫ್ -2 ರಿಲೀಸ್ ಗೆ ಸಿದ್ದವಾಗಿದ್ದು ಇಡೀ ಚಿತ್ರರಂಗವೇ ಭಾರಿ ನಿರೀಕ್ಷೆ ಹೊಂದಿದೆ.
ನಟ ಯಶ್ ರಾತ್ರೋ ರಾತ್ರಿ ಸ್ಟಾರ್ ಆದವರಲ್ಲ, ಸಾಕಷ್ಟು ನೋವು, ಅವಮಾನ, ಕಷ್ಟ ಎಲ್ಲವನ್ನು ಅನುಭವಿಸಿ ಮೇಲೆ ಬಂದವರು. ಅವರ ಕೆಲಸದ ಬಗ್ಗೆ ಇರುವ ಬದ್ಧತೆ, ಸಿನಿಮಾ ಪ್ರೀತಿ ಮತ್ತು ಪರಿಶ್ರಮದಿಂದ ಒಂದೊಂದೇ ಮೆಟ್ಟಿಲ ಮೂಲಕ ಯಶಸ್ಸನ್ನು ಕಂಡವರು. ಯಶ್ ನಟಿಸಿರುವ ಬಹುತೇಕ ಚಿತ್ರಗಳಲ್ಲಿ ಅವರ ಬದ್ದತೆಯನ್ನು ನಾವು ಕಾಣಬಹುದು.ಯಶ್ ಅವರು ಈಗ ಉನ್ನತ ಸ್ಥಾನದಲ್ಲಿದ್ದರೂ ಅವರು ನಡೆದು ಬಂದಿರುವ ದಾರಿಯನ್ನ ಎಂದಿಗೂ ಮರೆಯದ ವ್ಯಕ್ತಿತ್ವ ಈಗ ಮತ್ತೊಮ್ಮೆ ಯಶ್ ಅವರು ಸುದ್ದಿಯಲ್ಲಿದ್ದಾರೆ.

ಯಶ್ ಅವರ ಹಳೆಯ ವೀಡಿಯೋವೊಂದು ಸಕತ್ ಸೌಂಡ್ ಮಾಡುತ್ತಿದೆ. ಅದೇನೆಂದರೆ ಹಿಂದೆ, ಮೈಸೂರು ಮಹಾರಾಜ ಕಾಲೇಜಿನಲ್ಲಿ ನಡೆದ, ಸಾಂಸ್ಕ್ರತಿಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಯಶ್ ಅವರು ಅಥಿತಿಯಾಗಿ ಭಾಗವಹಿಸಿ ಕೊನೆಯಲ್ಲಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದರು ಅದು ಈಗ ಎಲ್ಲಡೆ ವೈರಲ್ ಆಗುತ್ತಿದೆ. ಕರ್ನಾಟಕದಲ್ಲಿ ಯಶ್ ಅವರ ಅಭಿಮಾನಿ ಬಳಗ ಬಹಳ ದೊಡ್ಡದಿದೆ. ಯಶ್ ಅವರ ಈ ಹಳೆಯ ವೀಡಿಯೋವನ್ನು ಅಭಿಮಾನಿಗಳು ಸಕತ್ ಎಂಜಾಯ್ ಮಾಡುತ್ತಿದ್ದು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡುತ್ತಿದ್ದಾರೆ ಈಗ ಹಳೆಯ ವೀಡಿಯೋ ಫುಲ್ ವೈರಲ್ ಆಗುತ್ತಿದೆ.
****