ಪಿಚ್ಚರ್ stories ಪಿಚ್ಚರ್ UPDATE

ಕೆಜಿಎಫ್ ಸಿನಿಮಾವನ್ನು ಹಾಡಿ ಹೊಗಳಿದ ಕೊರಿಯನ್ ಸ್ಟಾರ್ ಹೀರೊ

ಕೆಜಿಎಫ್ ಸಿನಿಮಾವನ್ನು ಹಾಡಿ ಹೊಗಳಿದ ಕೊರಿಯನ್ ಸ್ಟಾರ್ ಹೀರೊ
  • PublishedMarch 16, 2026


ಕೊರಿಯನ್ ಸಿನಿಮಾಗಳಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ವಿಶ್ವದಾದ್ಯಂತ ಮೋಡಿ ಮಾಡಿವೆ. ವಿಶ್ವದಲ್ಲಿಯೇ ಅತ್ಯುತ್ತಮ ಸಿನಿಮಾಗಳನ್ನು ನಿರ್ಮಿಸುವ ದೇಶಗಳಲ್ಲಿ ಕೊರಿಯಾ ಸಹ ಒಂದು. ಕೋವಿಡ್ ನಂತರದ ಒಟಿಟಿ ಕ್ರಾಂತಿಯ ಬಳಿಕವಂತೂ ಕೊರಿಯನ್ ಸಿನಿಮಾಗಳು ಸಣ್ಣ ಪುಟ್ಟ ನಗರ ಪಟ್ಟಣಗಳನ್ನೂ ತಲುಪಿವೆ. ಕೊರಿಯನ್ ಶೋಗಳು, ಕೊರಿಯನ್ ಹಾಡುಗಳು ಭಾರತದಲ್ಲಿಯೂ ಸಹ ಸಖತ್ ಜನಪ್ರಿಯ.
ಹೌದು.. ಇತ್ತೀಚೆಗಿನ ಸ್ಕ್ವಿಡ್ ಗೇಮ್ಸ್ ವೆಬ್ ಸರಣಿ ಸಹ ಭಾರಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ಸ್ಕ್ವಿಡ್ ಗೇಮ್ ಸೇರಿದಂತೆ ಕೊರಿಯಾದ ಹಲವು ಸಿನಿಮಾ, ಶೋಗಳಲ್ಲಿ ನಟಿಸಿರುವ ಸ್ಟಾರ್ ನಟರೊಬ್ಬರು ಕನ್ನಡದ ಕೆಜಿಎಫ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ..
ವಿ ಹಾ ಜುನ್ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಭಾರತೀಯ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಮೊದಲು ಕೆಜಿಎಫ್ ಸಿನಿಮಾದ ಬಗ್ಗೆ ಮಾತನಾಡಿದರು. ನನಗೆ ಕೆಲವು ಭಾರತೀಯ ಸಿನಿಮಾಗಳ ಪರಿಚಯ ಇದೆ. ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ಕೆಜಿಎಫ್ ಸಿನಿಮಾ ನನಗೆ ಬಹಳ ಇಷ್ಟ. ಅದೊಂದು ಅದ್ಭುತವಾದ ಬಹಳ ಅದ್ಧೂರಿಯಾದ ಆಕ್ಷನ್ ಸಿನಿಮಾ. ಬಹಳ ಇಂಟೆನ್ಸ್ ಆದ ಆಕ್ಷನ್ ಮತ್ತು ಸನ್ನಿವೇಶಗಳನ್ನು ಆ ಸಿನಿಮಾ ಹೊಂದಿದೆ ಎಂದಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *