ಧನುಷ್ ಸೇವ್:ಮಿಡ್ ವೀಕ್ ಅಲ್ಲಿ ಮನೆಗೆ ಹೋಗೊದು ಯಾರು?
ಬಿಗ್ ಬಾಸ್ ಕನ್ನಡದ ಈ ಸೀಸನ್‌ನ ಫಿನಾಲೆ ವೀಕ್ ಶುರುವಾಗಿದೆ.ಜಂಟಿ ಒಂಟಿ ಇಂದ ಆರಂಭವಾದ ಈ ಆವೃತ್ತಿ ಇನ್ನು 4-5 ದಿನಗಳಲ್ಲಿ ಅಂತ್ಯವಾಗಲಿದೆ.ಪ್ರತಿ ನಿತ್ಯ ರಾತ್ರಿ 9.30 ಆದ್ರೆ ಸಾಕು ಹಲವರ ಮನೆಯಲ್ಲಿ ಕಿರುತೆರೆಯ ದೊಡ್ಮನೆಯದ್ದೇ ದರ್ಬಾರಾಗಿತ್ತು.ಈ ವಾರ ಮುಗಿದ್ಮೇಲೆ ಮತ್ತೆ ನೆಕ್ಸ್ಟ್ ಸೀಸನ್ ಬರೋ ವರೆಗು ಬಿಗ್ ಬಾಸ್ ಆಡಿಯೆನ್ಸ್ ಕಾಯಬೇಕು.ಆದ್ರೆ ಸದ್ಯಕ್ಕೆ ಬಿಗ್ ಬಾಸ್ ಅಭಿಮಾನಿಗಳಿಗೆ ಈ ಸೀಸನ್ ಟಾಪ್ 6 ಯಾರು ಅನ್ನೋದೆ ಚಿಂತೆ .ಇದಕ್ಕೆ ಉತ್ತರ ಸಿಗೋದು ಮಿಡ್ ವೀಕ್ ಎಲಿಮಿನೇಷನ್ ಆದ್ಮೆಲೆ .ಹಾಗಾದ್ರೆ ಯಾರ ಪಯಣ ಫಿನಾಲೆ ಹಮತದಲ್ಲಿ ಅಂತ್ಯವಾಗುತ್ತೆ ಎನ್ನುವ ಪ್ರಶ್ನೆ ಕಾಡುತ್ತಿದೆ.
ಫಿನಾಲೆಗೆ ಹೋಗೊದು ಆರೇ ಕಂಟೆಸ್ಟೆಂಟ್ ,ಈಗ ಮನೆ ಒಳಗಿರೋದು ಏಳು ಮಂದಿ.ಸಾಮಾನ್ಯವಾಗಿ ಫಿನಾಲೆ ವಾರದಲ್ಲಿ ಎಲ್ಲರು ನಾಮಿನೇಟ್ ಆಗಿರುತ್ತಾರೆ.ಹಾಗೆ ಟಾಪ್ 6 ಅಲ್ಲಿ ಧನುಷ್ ಅವ್ರು ಈಗಾಗಲೇ ಮೊದಲನೆ ಫೈನಲಿಸ್ಟ್ ಆಗಿದ್ದಾರೆ.ಹಾಗಾಗಿ ಧನುಷ್ ಅವರನ್ನು ಬಿಟ್ಟು ಉಳಿದಿರುವ 6 ಜನರಲ್ಲಿ2 ಜನ ಸದ್ಯಕ್ಕೆ ಡೇಂಜರ್ ಜೋನ್ ನಲ್ಲಿ ಇದ್ದಾರೆ ಹಾಗಾದ್ರೆ ಆ ಮೂರು ಜನ ಯಾರು ಅನ್ನೋದನ್ನ ನೋಡೋಣ …
ಮೊದಲನೆಯದಾಗಿ ರಘು,ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದ ರಘು ,ಎಂಟ್ರಿಯಲ್ಲೆ ಒಂದು ಫೈಯರ್ ಇತ್ತು.ಬ್ಯಾಕ್ ಟು ಬ್ಯಾಕ್ ಕ್ಯಾಪ್ಟನ್ ಬೇರೆ ಅದ್ರು.ಪಕ್ಕ ಟಾಪ್ 3 ಅಲ್ಲಿ ಇದ್ದೇ ಇರ್ತಾರೆ ಅಂತ ಜನ ಅಂದುಕೊಂಡಿದ್ದರು.ಆದ್ರೆ ಎಲ್ಲೋ ದಿನ ಕಳೆದಂತೆ ರಘು ಅವ್ರು ಸೈಲೆಂಟ್ ಆಗ್ತಾ ಬಂದ್ರು.ಇದು ಅವ್ರಿಗೆ ಮೈನಸ್ ಆಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.ಇದರ ನಂತರ ಧೃವಂತ್ ,ಒನ್ ಮ್ಯಾನ್ ಆರ್ಮಿ ಆಗಿರೊ ಇವರು ಚೆನ್ನಾಗಿ ಏನೋ ಆಡ್ತಿದ್ದಾರೆ.ಬಿಗ್ ಬಾಸ್ ನ ಕರೆಕ್ಟ್ ಆಗಿ ಆಡ್ತಿರೊ ಇವ್ರ ಫ್ಯಾನ್ ಬೇಸ್ ಬೇರೆಯವರಿಗೆ ಹೋಲಿಸಿದರೆ ಅಷ್ಟು ಇಲ್ಲ .ಹಾಗಾಗಿ ವೋಟ್ ಮೇಲೆ ಪರಿಣಾಮ ಬೀಳ್ಬೋದು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ.
ಒಟ್ಟಿನಲ್ಲಿ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಯಾರು ಬಿಗ್ ಮನೆಗೆ ವಿದಾಯ ಹೇಳ್ತಾರೆ ಎಂದು ತಿಳಿಯಲು ಕಾದು ನೋಡ್ಬೇಕಿದೆ.ಎಲ್ಲಾ ಜನತೆಯ ವೋಟ್ ಮೇಲೆ ನಿಂತಿದೆ.ಮಿಡ್ ವೀಕ್ ಎಲಿಮಿನೇಷನ್ ಆದ ಬಳಿಕ ಈ ಸೀಸನ್ ನ ಟಾಪ್ 6 ಯಾರು ಅಂತ ಗೊತ್ತಾಗುತ್ತೆ.