ಗಿಲ್ಲಿ ರಿಯಲ್ಲೋ ಅಶ್ವಿನಿ ರಿಯಲ್ಲೋ? ಬಕ್ರ ಆಗ್ತಿದರ ದೊಡ್ಮನೆ ಆಡಿಯೇನ್ಸ್!
ಬಿಗ್ ಬಾಸ್ ಕನ್ನಡದ 12 ನೇ ಸೀಸನ್ ಇನ್ನೇನು ಕೊನೆಯಾಗುವ ಹಂತದಲ್ಲಿ ಇದೆ.ಅನೇಕ ಬೆಳವಣಿಗೆಯನ್ನ ನಾವು ಕಳೆದ 2 ವಾರಗಳಲ್ಲಿ ನಾವ್ ಕಾಣ್ತಾ ಇದೀವಿ. ಆರಂಭದಲ್ಲಿ ಪಾಸಿಟಿವ್ ಆಗಿ ಜನರ ಮನ ಗೆದ್ದವ್ರು, ಇನ್ನೇನು ಕೆಲವೇ ದಿನಗಳು ಇರೋ ಟೈಮ್ ಅಲ್ಲಿ ನೆಗೆಟಿವ್ ಆಗಿ ಕಾಣ್ತಿದಾರೆ. ಮತ್ತೊಂದು ಕಡೆ ನೆಗೆಟಿವ್ ಕಂಡವರು, ಈಗ ಪಾಸಿಟಿವ್ ಆಗಿ ಜನರ ಮನಸಿಗೆ ಹತ್ರ ಆಗ್ತಿದ್ದಾರೆ. ಉದಾಹರಣೆಗೆ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಅವ್ರು.
ಗಿಲ್ಲಿ ಅಂದ್ರೆ ಟಿ ಆರ್ ಪಿ, ಟಿಆರ್ ಪಿ ಅಂದ್ರೆ ಗಿಲ್ಲಿ. ಆರಂಭದಿಂದ ತಮ್ಮ ಹಾಸ್ಯ, ಸರಳತೆಯಿಂದ ಜನರ ಮನಸಲ್ಲಿ ಕೂತಿದ್ದ ಗಿಲ್ಲಿ. ಇತ್ತೀಚೆಗೆ ಅವರ ಬೇರೆ ರೂಪನೇ ನೋಡಕ್ ಸಿಗ್ತಿದೆ ಅನ್ನೋದು ಒಂದಿಷ್ಟು ಜನರ ಅಭಿಪ್ರಾಯ. “ಮಾತಿನ ಮೇಲೆ ಹಿಡಿತ ಇರ್ಬೇಕು ಗಿಲ್ಲಿಗೆ ಅನ್ನೋದು ಕೆಲವರ ಅಭಿಪ್ರಾಯ ಅದೇ ಅವರಿಗೆ ಮೈನಸ್ ಆಗ್ತಿದೆ ಅಂತ ಒಂದು ಕಡೆ ಗಿಲ್ಲಿಯವರದಾದ್ರೆ.
ಇನ್ನೊಂದು ಕಡೆ ನೆಗೆಟಿವ್ ಆಗಿ ಕಾಣಿಸಿಕೊಂಡ ರಾಜಮಾತೆ ಅಶ್ವಿನಿಯವರ ಈಗಿನ ಆಟದ ವೈಖರಿಯನ್ನು ಜನ ಇಷ್ಟ ಪಡ್ತಿದ್ದಾರೆ.ಮೊದಲಿನಿಂದಲೂ ಬಹಳಷ್ಟು ಕಂಟ್ರೋವರ್ಸಿ ಮಾಡಿಕೊಂಡಿರೋ ವ್ಯಕ್ತಿ ಅಂದ್ರೆ ಅದು ಅಶ್ವಿನಿಯವ್ರು. ಗೆಜ್ಜೆ ಪ್ರಾಂಕ್ ಲಿಮಿಟ್ ದಾಟಿರೋದು,ಎಸ್ ಕ್ಯಾಟಗರಿ ಅನ್ನೋ ಪದದ ಬಳಕೆ ಇವೆಲ್ಲವೂ ಹೊರಗಡೆ ಜನಕ್ಕೆ ಒಂದು ಚೂರು ಇಷ್ಟ ಆಗಿರ್ಲಿಲ್ಲ. ಆದ್ರೆ ಅಶ್ವಿನಿ 2.0 ವರ್ಷನ್ ಅನ್ನು ಕೆಲ ಜನ ಎಂಜಾಯ್ ಮಾಡ್ತಾ ಇದ್ದಾರೆ.
ಆದ್ರೆ ಇವೆಲ್ಲವನ್ನೂ ಒಟ್ಟಿಗೆ ನೋಡ್ತಾ ಇದ್ರೆ ರಿಯಲ್ ಗಿಲ್ಲಿ ಯಾರು? ರಿಯಲ್ ಅಶ್ವಿನಿ ಯಾರು? ಅನ್ನೋದೇ ಗೊತ್ತಾಗ್ತಿಲ್ಲ ಅಂತಾರೆ ಬಿಗ್ ಮನೆ ಫಾಲೋ ಮಾಡೋ ಜನ. ಆರಂಭದಿಂದ ಕಾಣಿಸಿಕೊಂಡ ಆ ಗಿಲ್ಲಿ ನಿಜಾನೋ ಅತ್ವ ಈ ಎರಡು ವಾರಗಳಲ್ಲಿ ಕಾಣ್ತಿರೋ ಗಿಲ್ಲಿ ನಿಜಾನೋ ಅನ್ನೋದು ಒಂದು ಕಡೆ ಆದ್ರೆ. ಪ್ರಾರಂಭಿಕ ಹಂತದಲ್ಲಿ ನೆಗೆಟಿವ್ ಆಗಿ ಕಂಡ ಅಶ್ವಿನಿ ಅಷ್ಟು ಬೇಗ ಹೆಂಗೆ ಚೇಂಜ್ ಆದ್ರೂ. ಅತ್ವ ಚೇಂಜ್ ಆಗಿಲ್ಲ ಸುಮ್ನೆ ನಾಟಕ ಮಾಡ್ತಿದ್ದಾರೋ? ಎಲ್ಲೋ ಮನರಂಜನೆ ಮಾಡೊ ಬರದಲ್ಲಿ ತಮ್ಮ ನಿಜವಾದ ಮುಖವಾಡವ ಹೊರಗಡೆ ಬರ್ತಿದೆಯಾ ಅನ್ನೋದೇ ಯಕ್ಷ ಪ್ರಶ್ನೆ.