ತಾಯಿ ಆಗಿದ್ದೇ ತಪ್ಪಾಯ್ತಾ ನಯನತಾರ ?

ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರ ಊರೆಲ್ಲಾ ಸುತ್ತಾಡಿ ಮದುವೆ ಸಂಭ್ರಮವನ್ನ ಮುಗಿಸಿಕೊಂಡು ಬಂದ್ರು…ಇನ್ನು ಮದ್ವೆ ಆಗಿ ನಾಲ್ಕು ತಿಂಗಳು ಕಳೆಯೋ ಹೊತ್ತಿಗೆ ಸಿಹಿ ಸುದ್ದಿಕೊಟ್ಟೇ ಬಿಟ್ರು ನಯನತಾರ..ಓ ಹೊಸ ಅತಿಥಿ ಬರ್ತಾರೆ ಅನ್ನೋ ಅಷ್ಟರಲ್ಲಿ ಮಕ್ಕಳೇ ನಯನತಾರ ಅವ್ರ ಕೈ ಸೇರಿತ್ತು…ಅವಳಿ ಜವಳಿ ಮಕ್ಕಳನ್ನ ಮನೆಗೆ ಬರಮಾಡಿಕೊಳ್ಳುವ ಮೂಲಕ ನಯನತಾರ ಹಾಗೂ ವಿಘ್ನೆಶ್ ತಂದೆ -ತಾಯಿ ಆಗಿದ್ದೇವೆ ಎಂದು ಅನೌನ್ಸ್ ಮಾಡಿದ್ರು…ಮಕ್ಕಳು ಬಂದ್ರು ಅಂತ ಖುಷಿ ಪಡೋ ಹೊತ್ತಿನಲ್ಲಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ ನಯನಾತಾರ ಮತ್ತು ವಿಘ್ನೆಶ್..ಬಾಡಿಗೆ ತಾಯಿಂದ ಮಕ್ಕಳು ಪಡೆದಿದ್ದೇ ನಯನಾತಾರಗೆ ತಲೆನೋವಾಗಿದೆ..ಖುಷಿಯ ಸುದ್ದಿ ಹಂಚಿಕೊಳ್ಳುತ್ತಿದ್ದಂತೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ…


ಅಷ್ಟಕ್ಕೂ ಬಾಡಿಗೆ ತಾಯಿಯಿಂದ ಮಕ್ಕಳು ಪಡೆದಿದ್ದರಲ್ಲಿ ತಪ್ಪೇನು ಅಂತ ಕೇಳಿದ್ರೆ, ಅದಕ್ಕೆ ಉತ್ತರ, ಬಾಡಿಗೆ ತಾಯಿ ಕಾಯ್ದೆ….ಇದೇ ವರ್ಷದ ಆರಂಭದಿಂದ ಬಾಡಿಗೆ ತಾಯಿ ಕಾಯ್ದೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ..ಈ ಹಿಂದೆ ಇಲ್ಲದಂತಹ ಹೊಸ ಹೊಸ ರೂಲ್ಸ್ ಗಳು ಈಗ ಈ ಕಾಯ್ದೆಯಲ್ಲಿ ಸೇರಿಕೊಂಡಿದೆ..ಬಾಡಿಗೆ ತಾಯಿಯಿಂದ ಮಕ್ಕಳನ್ನ ಅಥವಾ ಮಗುವನ್ನ ಪಡೆಯಬೇಕು ಅಂತಾದ್ರೆ ಮದುವೆ ಆಗಿ ಐದು ವರ್ಷಗಳು ಆಗಿರಬೇಕು..ಗಂಡ-ಹಂಡತಿ ಇಬ್ಬರಲ್ಲಿ ಒಬ್ಬರಿಗೆ ಮಕ್ಕಳು ಪಡೆಯುವ ಸಾಮರ್ಥ್ಯ ಇಲ್ಲ ಎನ್ನುವುದು ವೈದ್ಯಕೀಯವಾಗಿ ಸಾಭೀತಾಗಬೇಕು,..ಬಾಡಿಗೆ ತಾಯಿಗೆ ಮದುವೆ ಆಗಿರಬೇಕು, ತಾಯಿ ಆರೋಗ್ಯವಾಗಿರಬೇಕು, ಆಕೆಯ ವಯಸ್ಸು 21-31ರ ಅಂತರ ಇರಬೇಕು, ಮಗು ಹೆರುವ ಮಹಿಳೆ ಹಣ ಪಡಯುವಂತಿಲ್ಲ, ವಾಣಿಜ್ಯ ಬಾಡಿಗೆತನದ ಮೇಳೆ ನಿರ್ಬಂದ ಹೇರಲಾಗಿದೆ..ಬಾಡಿಗೆ ತಾಯಿ ಆಗಲು ಕುಟುಂಬದ ಅನುಮೋದನೆ ಇರಬೇಕು.. ಇಷ್ಟೆಲ್ಲಾ ರೂಲ್ಸ್ ಇದ್ದು ಇದನ್ನ ಪಾಲೋ ಮಾಡಿದ್ರೆ ಮಾತ್ರ ಬಾಡಿಗೆ ತಾಯಿಯಿಂದ ಮಗು ಪಡೆಯಬಹುದಾಗಿದೆ…



ಇನ್ನು ನಯನಾತಾರ ವಿಚಾರದಲ್ಲಿ ಮದುವೆ ಆಗಿ ನಾಲ್ಕು ತಿಂಗಳಾಗಿದೆ ಅಷ್ಟೇ ..ಯಾರಿಂದ ಹೇಗೆ ಮಕ್ಕಳು ಪಡೆದ್ರು ಅನ್ನೋದು ತಿಳಿದಿಲ್ಲ….ಸಿನಿಮಾ ಕೆರಿಯರ್ ಗಾಗಿ ಬಾಡಿಗೆ ತಾಯಿಯಿಂದ ಮಗು ಪಡೆದುಕೊಂಡಿರೋದು ಮೇಲ್ನೋಟಕ್ಕೆ ಕನ್ಫರ್ಮ್ ಆಗಿದೆ.. ಹಾಗಾಗಿ ತಮಿಳುನಾಡಿನ ಆರೋಗ್ಯ ಸಚಿವರು ನಯನತಾರ ಹಾಗೂ ವಿಘ್ನೆಶ್ ಮೇಲೆ ಈ ವಿಚಾರವಾಗಿ ವಿಚಾರಣೆ ಮಾಡಲು ಡೈರೆಕ್ಟರ್ ಆಫ್ ಮೆಡಿಕಲ್ ಸರ್ವಿಸ್ ಗೆ ಆದೇಶ ಮಾಡಿದ್ದಾರೆ..ಒಟ್ಟಾರೆ ಅದೇನೇ ಇರಲಿ ಈಗಿನ ನಾಯಕ ನಟಿಯರು ತಮ್ಮ ಕರಿಯರ್ ಹಾಗೂ ಬ್ಯೂಟಿ ಕಾಪಾಡಿಕೊಳ್ಳಲು ,ಮಕ್ಕಳು ಪಡೆಯಲ ಬಾಡಿಗೆ ತಾಯಿಯ ಮೊರೆ ಹೋಗುತ್ತಿದ್ದಾರೆ ಅನ್ನೋದೇ ಬೇಸರದ ಸಂಗತಿ ಅಂತಿದ್ದಾರೆ ಹಿರಿಯರು..
ಪವಿತ್ರ. ಬಿ