ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ ನಡುವೆ ಮೂಡಿತಾ ಮನಸ್ತಾಪ?
ಚಂದನವನದಲ್ಲಿ ಶೆಟ್ಟಿ ಗ್ಯಾಂಗ್ ಹೊಸ ಅಲೆಯನ್ನೇ ಎಬ್ಬಿಸಿ ಬಿಟ್ಟಿದೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ತಮ್ಮ ಸಿನಿಮಾಗಳ ಮೂಲಕ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ. ಹಿಟ್ ಆಗುವುದು ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿಯೂ ಕನ್ನಡ ಸಿನಿಮಾಗಳ ಬಗ್ಗೆ ಗೌರವದಿಂದ ಮಾತನಾಡುವಂತ ಒಳ್ಳೆಯ ಸಿನಿಮಾಗಳನ್ನು ನೀಡಿದ್ದಾರೆ. ರಕ್ಷಿತ್, ರಿಷಬ್, ರಾಜ್ ಮತ್ತು ಪ್ರಮೋದ್ ಶೆಟ್ಟಿ ಒಳ್ಳೆಯ ಗೆಳೆಯರು ಕೂಡ ಹೌದು. ಇವರನ್ನು ಒಟ್ಟಿಗೆ ಶೆಟ್ಟಿ ಗ್ಯಾಂಗ್ ಎಂದೇ ಕರಿತಾರೆ ಜನ. ಆದರೆ ಈ ಶೆಟ್ಟಿ ಗ್ಯಾಂಗ್ನಲ್ಲಿ ಈಗ ಬಿರುಕು ಉಂಟಾಗಿದ್ಯಾ ಅನ್ನೋ ಡೌಟ್ ಮೂಡಿದೆ ಫ್ಯಾನ್ಸ್ ಗೆ.
ಹೌದು. ರಿಷಬ್ ಶೆಟ್ಟಿಯವರ ಕಾಂತಾರ ಚಾಪ್ಟರ್ 1 ಚಿತ್ರದ ಬಗ್ಗೆ ರಾಜ್, ರಕ್ಷಿತ್ ಆಗಲಿ ಪೋಸ್ಟ್ ಹಾಕ್ಕೊಂಡಿಲ್ಲ. ಆದರೆ ಕಾಂತಾರ ಬಂದಾಗ ಈ ಇಬ್ಬರೂ ಸಹ ರಿಷಬ್ ಶೆಟ್ಟಿಗೆ ಸಹಾಯ ಮಾಡಿದ್ರು, ಆದರೆ ಈ ಬಾರಿ ಇಬ್ಬರೂ ಸಹ ಕಾಂತಾರ ಚಾಪ್ಟರ್ 1 ಚಿತ್ರೀಕರಣದಿಂದ ದೂರವೇ ಉಳಿದಿದ್ದಾರೆ. ಆಗಲೇ ಈ ಮೂವರ ಮಧ್ಯೆ ಬಿರುಕು ಮೂಡಿದ್ಯಾ ಅನ್ನೋ ಅನುಮಾನ ಉಂಟಾಗಿತ್ತು.
ಅಂದಹಾಗೆ ಶಿವಣ್ಣ, ಉಪ್ಪಿ ಮತ್ತು ರಾಜ್ ನಟಿಸಿರುವ 45 ಸಿನಿಮಾ ಬಿಡುಗಡೆ ಆಗುತ್ತಿದೆ. ರಿಷಬ್ ಅವರು ಸಿನಿಮಾಕ್ಕೆ ಶುಭ ಹಾರೈಸಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ರಾಜ್ ಅವರ ಹೆಸರು ಹೇಳಿಲ್ಲ.ಇದು ರಾಜ್ ಹಾಗೂ ರಿಷಬ್ ನಡುವೆ ಯಾವುದು ಸರಿ ಇಲ್ಲ ಎಂಬ ಸುದ್ದಿಗೆ ಪುಷ್ಠಿ ನೀಡಿದೆ.
ರಿಷಬ್ ವಿಡಿಯೋದಲ್ಲಿ “ನನ್ನ ಇಷ್ಟದ ನಟರುಗಳಾದ ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಈ ಸಿನಿಮಾನಲ್ಲಿ ನಟಿಸಿದ್ದಾರೆ. ಇಬ್ಬರ ಪಾತ್ರವೂ ಸಹ ಅದ್ಭುತವಾಗಿ ಮೂಡಿ ಬಂದಿದೆ. ಇಬ್ಬರನ್ನು ತೆರೆಯ ಮೇಲೆ ನೋಡುವುದು ಬಹಳ ಖುಷಿಯ ವಿಷಯ. ಸಿನಿಮಾ ಸಹ ಅಷ್ಟೇ ಕುತೂಹಲಕಾರಿಯಾಗಿ ಮೂಡಿ ಬಂದಿದೆ ಎಂಬುದು ನನ್ನ ನಂಬಿಕೆ. ಇನ್ನೂ.. ಇಡೀ ಸಿನಿಮಾಕ್ಕೆ ಒಳ್ಳೆಯದಾಗಲಿ” ಎಂದಿದ್ದಾರೆ ನಟ ರಿಷಬ್ ಶೆಟ್ಟಿ. 45 ಸಿನಿಮಾನಲ್ಲಿ ರಾಜ್ ನಟಿಸಿದ್ದರೂ ಸಹ ರಿಷಬ್ ಅವರು ರಾಜ್ ಬಿ ಶೆಟ್ಟಿಯ ಹೆಸರು ಹೇಳಿಲ್ಲ. ಅಲ್ಲದೆ, 45 ಸಿನಿಮಾ ಶಿವಣ್ಣ ಹಾಗೂ ಉಪೇಂದ್ರ ನಟನೆಯ ಸಿನಿಮಾ ಎಂದು ವಿಡಿಯೋನಲ್ಲಿ ಹೇಳಿದ್ದಾರೆ. ಒಟ್ನಲ್ಲಿ ರಿಷಬ್ ಮತ್ತು ರಾಜ್ ನಡುವೆ ಯಾವುದೂ ಸರಿ ಇಲ್ಲ ಎಂಬುವುದು ತಿಳಿಯುತ್ತಿದೆ.