ಬೇಲ್ ರದ್ದಾದಾಗ ನೀನ್ ಅಳ್ಬೇಡ ಮಗನ್ನ ನೋಡ್ಕೋ -ದರ್ಶನ್
ವಿಜಯಲಕ್ಷ್ಮಿ ಡಿ ಕಂಪನಿಯ ಯೌಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಗೆ ಬೇಲ್ ಕ್ಯಾನ್ಸಲ್ ಆದಾಗ ದರ್ಶನ್ ಮನಸ್ಥಿತಿ ಹೇಗಿತ್ತು ಅನ್ನೋದನ್ನ ಡೆವಿಲ್ ಸಿನಿಮಾ ನಾಯಕಿ ನಟಿ ರಚನಾ ರೈ ಕೇಳಿದ ಪ್ರಶ್ನೆಗೆ ವಿಜಯಲಕ್ಷ್ಮಿ ಅವರು ಏನು ಹೇಳಿದ್ರು ಅನ್ನೋದರ ಸಂಪೂರ್ಣ ವಿವರ ಇಲ್ಲಿದೆ.
ರೇಣುಕಾ ಸ್ವಾಮಿ ಕೊ*ಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾಗ ಬೆನ್ನು ನೋವಿನ ಸಮಸ್ಯೆಗೆ ಬೇಲ್ ಮೇಲೆ ಹೊರ ಬಂದಿದ್ದರು. ನಂತರದ ದಿನಗಳಲ್ಲಿ ಬೇಲ್ ಕ್ಯಾನ್ಸಲ್ ಆಗಿತ್ತು. ಆಗ ದರ್ಶನ್ ಗೆ ಬೇಲ್ ಸಿಗ್ಲಿಲ್ಲ ಎಂದು ತಿಳಿದಾಗ “ದರ್ಶನ್ ಗೆ ಬೇಲ್ ಸಿಗಲಿಲ್ಲ ಎಂದು ತಿಳಿದಾಗ ನನಗೆ 15 ನಿಮಿಷ ಏನಾಗ್ತಿದೆ ಅಂತನೇ ಗೊತ್ತಾಗ್ಲಿಲ್ಲ. ನಂತರ ದರ್ಶನ್ ಗೆ ಹೇಳ್ದೆ. ಅವರು ಸ್ವಲ್ಪ ಸಮಯ ತೊಗೊಂಡು ನನ್ನ ಬಟ್ಟೆ ಎಲ್ಲಾ ಪ್ಯಾಕ್ ಮಾಡು ನಾನ್ ಬರ್ತಿದೀನಿ. ನೀನು ಅಳ್ಬೇಡ ಮಗನ ಮತ್ತು ಮನೆಯವ್ರನ್ನ ಚೆನ್ನಾಗಿ ನೋಡ್ಕೋ ಎಂದು ಹೇಳಿದ್ರು” ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.