ಪಿಚ್ಚರ್ UPDATE

ಸಾಯಿ ಧರ್ಮ ತೇಜ್ ಅಭಿನಯದ ʻವಿರೂಪಾಕ್ಷʻ​ ಪೋಸ್ಟರ್‌ ರಿಲೀಸ್‌

ಸಾಯಿ ಧರ್ಮ ತೇಜ್ ಅಭಿನಯದ ʻವಿರೂಪಾಕ್ಷʻ​ ಪೋಸ್ಟರ್‌ ರಿಲೀಸ್‌
  • PublishedDecember 14, 2022

ʻಸುಪ್ರೀಂ ಹೀರೋ’ ಸಾಯಿ ಧರ್ಮ ತೇಜ್ ಅಭಿನಯದ ಪ್ಯಾನ್-ಇಂಡಿಯಾ ಮಿಸ್ಟ್ರಿ-ಥ್ರಿಲ್ಲರ್ ಸಿನಿಮಾಕ್ಕೆ ‘ವಿರೂಪಾಕ್ಷ’ ಅಥಮ ಟೈಟಲ್‌ ಇಡಲಾಗಿದ್ದು, ಚಿತ್ರದ ಟೈಟಲ್‌ ಗ್ಲಿಂಪ್ಸ್‌ ಬಿಡುಗಡೆಯಾಗಿದೆ.ʻವಿರೂಪಾಕ್ಷ’ ಸಿನಿಮಾವನ್ನು ಸುಕುಮಾರ್ ರೈಟಿಂಗ್ಸ್ ಸಹಯೋಗದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಚಿತ್ರ ಎಲ್‌ಎಲ್‌ಪಿ ನಿರ್ಮಿಸುತ್ತಿದೆ. ಈ ಚಿತ್ರವನ್ನು ಖ್ಯಾತ ನಿರ್ಮಾಪಕ ಬಿ.ವಿ.ಎಸ್.ಎನ್. ಪ್ರಸಾದ್ ನಿರ್ಮಿಸಿದರೆ, ಬಾಪಿನೀಡು ಪ್ರೆಸಂಟ್‌ ಮಾಡುತ್ತಿದ್ದಾರೆ.

ಇದು 1990ರ ಕಾಲಘಟ್ಟದಲ್ಲಿ ನಡೆಯುವ ಕಥೆಯಾಗಿದ್ದು, ಕಾಡಿಗೆ ಅಂಟಿಕೊಂಡಿರುವ ಹಳ್ಳಿಯೊಂದರಲ್ಲಿ ಮೂಢನಂಬಿಕೆಗಳ ಹೆಸರಿನಲ್ಲಿ ನಡೆಯುವ ಕೆಲವು ವಿಲಕ್ಷಣ ಘಟನೆಗಳನ್ನು ನಾಯಕ ಹೇಗೆ ನಿಭಾಯಿಸುತ್ತಾನೆ ಅನ್ನೋದೇ ಸಿನಿಮಾ ಕಥೆ..! ಕಳೆದ ವರ್ಷ ಹೈದರಾಬಾದ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಿಂದ ಚೇತರಿಸಿಕೊಂಡಿರುವ ಸಾಯಿ ಧರ್ಮ​ ತೇಜ್ ಈ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವನ್ನು ಕಾರ್ತಿಕ್​ ದಂಡು ನಿರ್ದೇಶಿಸಿದ್ದು, ಶ್ಯಾಮ್​ ದತ್​ ಅವರ ಛಾಯಾಗ್ರಹಣ ಮತ್ತು ಕನ್ನಡದ ಅಜನೀಶ್​ ಲೋಕನಾಥ್​ ಸಂಗೀತವಿದೆ. ʻವಿರೂಪಾಕ್ಷ’ ಚಿತ್ರವು ಏಪ್ರಿಲ್ 21, 2023ರಂದು ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಚಿತ್ರವಾಗಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

Written By
kiranbchandra